ರಾಜಕೀಯ

ಒಡಿಶಾದ ಸನ್ಯಾಸಿಗೆ ಒಲಿದ ಸಚಿವ ಸ್ಥಾನ

Published

on

ಸುದ್ದಿದಿನ,ನವದೆಹಲಿ: ಸಜ್ಜನಿಕೆ, ಸರಳ ಜೀವಿ, ಸಾಮಾನ್ಯರ ನೇತಾ ಪ್ರತಾಪ್​ ಸರಂಗಿ ಅವರಿಗೂ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಗುರುವಾರ  ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಒಡಿಶಾದ ಬಲಸೂರ್​ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್​ ಸರಂಗಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಇವರ ಹೆಸರನ್ನ ಹೇಳುತ್ತಿದ್ದಂತೆ ಗಣ್ಯರು ಚಪ್ಪಾಳಿ ತಟ್ಟಿ, ಹರ್ಷ ವ್ಯಕ್ತಪಡಿಸಿದರು.

ಒಡಿಶಾದ ‘ಮೋದಿ’
ಪ್ರತಾಪ್​ ಸರಂಗಿ ಒಡಿಶಾದ ಮೋದಿ ಅಂತಾ ಫೇಮಸ್​. ಪ್ರತಾಪ್​ ಸರಂಗಿ ಶ್ರೀಮಂತರಂತೂ ಅಲ್ಲ. ನಿಲಗಿರಿ ವಿಧಾನಭಾ ಕ್ಷೇತ್ರದಿಂದ ಎರಡು ಬಾರಿ (2004-2009 & 2009-2014) ಶಾಸಕರಾಗಿ ಆಯ್ಕೆಯಾಗಿದ್ರೂ ಕೂಡಾ, ವಾಸಿಸಲು ಇವರಿಗೆ ಸ್ವಂತ ಮನೆಯೂ ಇಲ್ಲ.

ಅವಿವಾಹಿತ ಪ್ರತಾಪ್​ ಸರಂಗಿ, ಕಳೆದ ವರ್ಷ ತನ್ನ ತಾಯಿಯನ್ನು ಕಳೆದುಕೊಂಡಿದ್ರು. ಬರೀ ಸೈಕಲ್​ನಲ್ಲಿ ಕ್ಷೇತ್ರದೆಲ್ಲೆಡೆ ಸುತ್ತಿ, ತಳ ಮಟ್ಟದಿಂದ ಪಕ್ಷವನ್ನು ಸಂಘಟನೆ ಮಾಡಿದ್ರು. ಅವರ ಪರಿಶ್ರಮ ಮೆಚ್ಚಿದ ಬಿಜೆಪಿ ಈ ಬಾರಿ ಬಲಸೂರ್​ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿತ್ತು. ಪ್ರತಾಪ್​ ಸರಂಗಿಯವರ ಶಿಸ್ತು, ಕೆಲಸವನ್ನು ಮೆಚ್ಚಿದ್ದ ಕಾರ್ಯಕರ್ತರು ಹಾಗೂ ಮತದಾರರು ಈ ಬಾರಿ ಗೆಲ್ಲಿಸಿ, ಸಂಸತ್​ಗೆ ಕಳುಹಿಸಿಕೊಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version