ದಿನದ ಸುದ್ದಿ

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಂಸದ ಜಿ.ಎಂ ಸಿದ್ದೇಶ್ವರ ‘ವಿದ್ಯುತ್ ಚಾಲಿತ ಹಬೆ ಯಂತ್ರ’ ವಿತರಣೆ

Published

on

ಸುದ್ದಿದಿನ, ದಾವಣಗೆರೆ : ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಬಿಳಿಚೋಡು ಮತ್ತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ‘ವಿದ್ಯುತ್ ಚಾಲಿತ ಹಬೆ ಯಂತ್ರ’ವನ್ನು ಸೋಮವಾರ ಸಂಸದ ಜಿ.ಎಂ ಸಿದ್ದೇಶ್ವರ ಅವರು ವಿತರಿಸಿದರು.

ಇದನ್ನೂ ಓದಿ |ದಾವಣಗೆರೆ | ಗ್ರಾಮಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ; ಜನತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿರುವುದೇ ಕಾರಣ | ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ಈ ಸಂದರ್ಭದಲ್ಲಿ ಜಗಳೂರು ಕ್ಷೇತ್ರದ ಶಾಸಕರಾದ ಶ್ರೀ ಎಸ್.ವಿ ರಾಮಚಂದ್ರಪ್ಪ, ಶ್ರೀ ಪ್ರೋ. ಲಿಂಗಣ್ಣ, ಮಯಕೊಂಡ ಶಾಸಕರು, ಪೂಜ್ಯ ಮಹಾ ಪೌರರಾದ ಶ್ರೀ ಎಸ್. ಟಿ.ವೀರೇಶ್, ದಾವಣಗೆರೆ ಜಿಲ್ಲಾಧಿಕಾರಿಗಳಾದ ಶ್ರೀ ಮಹಂತೇಶ ಬಿಳಗಿ ಐ.ಎ.ಎಸ್ ಶ್ರೀ ಹನುಮಂತರಾಯ ಐ.ಪಿ.ಎಸ್ ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಶ್ರೀ ವಿಜಯ ಮಹಾಂತೇಶ್ ದಾನಮ್ಮನವರ್, ಸಿಇಒ ದಾವಣಗೆರೆ , ಶ್ರೀ ನರಸಿಂಹ ವಿ. ತಾಮ್ರಧ್ವಜ ಡಿವೈ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ರವರು ಹಾಗೂ ಶ್ರೀ ಮಂಜುನಾಥ ಪಂಡಿತ್ ಸಿ.ಪಿ.ಐ ಜಗಳೂರು, ಶ್ರೀ ನಿಂಗನಗೌಡ ನೆಗಳೂರು , ಪೊಲೀಸ್ ನಿರೀಕ್ಷಕರು ಮತ್ತು ದಾವಣಗೆರೆ ಗ್ರಾಮಾಂತರ ಠಾಣೆ ಹಾಗೂ ಬಿಳಿಚೋಡು ಪೊಲೀಸ್ ಠಾಣೆಯ ಅಧಿಕಾರಿಗಳು, ಸಿಬ್ಬಂದಿಯವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version