ದಿನದ ಸುದ್ದಿ

ಬಹುಕೋಟಿ ಮೇವು ಹಗರಣ | ಲಾಲೂ ಪ್ರಸಾದ್ ಯಾದವ್ ಗೆ ಜಾಮೀನು

Published

on

ಸುದ್ದಿದಿನ ಡೆಸ್ಕ್ : ಬಹುಕೋಟಿ ಮೇವು ಹಗರಣದಲ್ಲಿ ದೋಷಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಈ ಪ್ರಕರಣ ಸಂಬಂಧ ಸಿಬಿಐ ವಾದವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಅಪ್ರೇಶ್ ಕುಮಾರ್ಸಿಂಗ್, ಲಾಲೂ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ಅಂತಿಮ ವಿಚಾರಣೆಯನ್ನು ನಡೆಸಿ 10 ಲಕ್ಷ ರೂಪಾಯಿ ಭದ್ರತಾ ಠೇವಣಿಯೊಂದಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಲಾಲೂ ಪ್ರಸಾದ್ ಅವರಿಗೆ ನೀಡಿರುವ ಶಿಕ್ಷೆಯ ಅವಧಿಯ ಅರ್ಧದಷ್ಟನ್ನೂ ಇನ್ನೂ ಪೂರೈಸಿಲ್ಲ. ಈ ಹಂತದಲ್ಲಿ ಅವರಿಗೆ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಸಿಬಿಐ ತನ್ನ ವಾದವನ್ನು ಮಂಡಿಸಿತು.

ಲಾಲೂ ಪ್ರಸಾದ್ ಪ್ರಸ್ತುತ ನವದೆಹಲಿಯ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾರ್ಖಂಡ್ ಹೈಕೋರ್ಟ್ ನೀಡಿರುವ ಜಾಮೀನಿನ ಆಧಾರದಲ್ಲಿ ಲಾಲೂ ಪ್ರಸಾದ್ ಸೆರೆವಾಸದಿಂದ ಶೀಘ್ರ ಹೊರಬರಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version