ದಿನದ ಸುದ್ದಿ
ಸಂಗೀತ ಸಂಯೋಜಕ ರಾಜನ್ ಗೆ ಗಣ್ಯರ ಸಂತಾಪ
ಕನ್ನಡ ಚಿತ್ರರಂಗದ ಮೇರು ಸಂಗೀತ ಸಂಯೋಜಕ ಜೋಡಿ ರಾಜನ್-ನಾಗೇಂದ್ರ. ಈ ಸಹೋದರರಲ್ಲಿ ನಾಗೇಂದ್ರ 2000ರಲ್ಲಿ ನಮ್ಮನ್ನು ಅಗಲಿದ್ದರು. ನಿನ್ನೆ ಭಾನುವಾರ ರಾತ್ರಿ 11 ಗಂಟೆಗೆ ರಾಜನ್ (85) ಇಹಲೋಕ ತ್ಯಜಿಸಿದ್ದಾರೆ. ‘ಸೌಭಾಗ್ಯಲಕ್ಷ್ಮಿ’ (1953) ರಾಜನ್-ನಾಗೇಂದ್ರ ಸಂಗೀತ ಸಂಯೋಜನೆಯ ಮೊದಲ ಸಿನಿಮಾ.
ಕನ್ನಡ ಸೇರಿದಂತೆ ತೆಲುಗು, ತಮಿಳು, ತುಳು, ಸಿಂಹಳಿ ಭಾಷೆಗಳ ಮುನ್ನೂರ ಎಪ್ಪತ್ತೈದಕ್ಕೂ ಹೆಚ್ಚು ಸಿನಿಮಾಗಳು, ಹಲವಾರು ಭಕ್ತಿಗೀತೆ ಆಲ್ಬಂಗಳಿಗೆ ರಾಜನ್-ನಾಗೇಂದ್ರ ಸಂಗೀತ ಸಂಯೋಜಿಸಿದ್ದಾರೆ.
ಮೊನ್ನೆಯವರೆಗೂ ರಾಜನ್ ತಮ್ಮ ‘ಸಪ್ತಸ್ವರಾಂಜಲಿ’ ಸಂಗೀತ ಶಾಲೆಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಅವರ ಗರಡಿಯಲ್ಲಿ ನೂರಾರು ಸಂಗೀತರಾರರು ತಯಾರಾಗಿದ್ದು, ತಮ್ಮ ಸಂಗೀತ ಸಂಯೋಜನೆಯ ಹಾಡುಗಳ ಮೂಲಕ ಅವರು ಸದಾ ಕನ್ನಡಿಗರ ಮನದಲ್ಲುಳಿಯಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243