ಬಹಿರಂಗ
ಒಂದೇ ಒಂದು ಸೀಜನ್ ಮುಸ್ಲಿಮರು ವ್ಯಾಪಾರ ನಿಲ್ಲಿಸಿಬಿಟ್ಟರೆ..!?
- ಸುರೇಶ ಶಿಕಾರಿಪುರ
ಒಂದೇ ಒಂದು ಸೀಜನ್ ಮುಸ್ಲಿಮರು ವ್ಯಾಪಾರ ನಿಲ್ಲಿಸಿಬಿಟ್ಟರೆ, ಕೋಟ್ಯಾಂತರ ಹಿಂದೂ ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ.
ಮಾವು
ಹುಣಸೆ
ಹುಣಸೆ ಬಿಕ್ಕ
ಲಿಂಬು
ಪೇರಳೆ
ಕಿತ್ತಳೆ
ಕಬ್ಬು (ಕಬ್ಬಿನ ಹಾಲಿಗಾಗಿ)
ಶುಂಠಿ
ಅರಿಶಿನ
ಎಳನೀರು
ಕಲ್ಲಂಗಡಿ
ಪಪಾಯಿ
ಬಾಳೆ
ಅಡಿಕೆ
ಗೇರು ಬೀಜ
ಬಾರೆ ಹಣ್ಣು
ದ್ರಾಕ್ಷಿ
ಡ್ರ್ಯಾಗನ್ ಫ್ರೂಟ್ಸ್
ಅಂಜೂರ
ಬನಾಸಪತ್ರೆ
ಗಂಜಾಮ್ ಹಣ್ಣು
ಹಲಸು
ರೇಶ್ಮೆ
ಮಲ್ಲಿಗೆ
ಸುಗಂಧರಾಜ
ಚೆಂಡು ಹೂವು
ಕನಕಾಂಬರ
ಸಾವಂತಿಗೆ
ಗುಲಾಬಿ
ವೀಳ್ಯದ ಎಲೆ (ಮುಂಬೈ ಕರಾಚಿ ಮಾರ್ಕೆಟ್)
ಮರಮಟ್ಟು ಸಾಧನಗಳು
ಒಣಗಿದ ಅಡಿಕೆ ಮರ
ಒಣಗಿದ ತೆಂಗಿನ ಮರ
ಒಣಗಿದ ಬೈನೆ ಮರ
ಇತ್ಯಾದಿಗಳನ್ನು ಕೊಳ್ಳುವವರಿಲ್ಲದೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಇವೆಲ್ಲವುಗಳ ವ್ಯಾಪಾರವನ್ನು ಹಿಂದೂಗಳು ಮಾಡುವುದಿಲ್ಲ ಎಂದಲ್ಲ. ಆದರೆ ಅವರ ಪ್ರಮಾಣ ಶೇಖಡ 10 ರಿಂದ 15 % ಇರಬಹುದು. ಇವರಿಗೆ ರಾಷ್ಟ್ರ ಮಟ್ಟದ ಅಂತರ್ರಾಷ್ಟ್ರ ಮಟ್ಟದ ವ್ಯಾಪಾರ ವಹಿವಾಟಿನಲ್ಲಿ ಮುಸ್ಲಿಮರಷ್ಟು ಸಂಪರ್ಕ ಹಿಡಿತ ಇಲ್ಲ. ಅಂದರೆ ರೈತರು ಬೆಳೆದ ಶೇಖಡ 80% ಉತ್ಪನ್ನ ಮಣ್ಣುಪಾಲಾಗುತ್ತದೆ.
ಇನ್ನು —
ಹಳೆ ಕಬ್ಬಿಣ
ಪ್ಲಾಸ್ಟಿಕ್
ಪೇಪರ್
ಎಲಕ್ಟ್ರಾನಿಕ್ ವಸ್ತುಗಳು
ಸೆಕೆಂಡ್ ಹ್ಯಾಂಡ್ ಗಾಡಿಗಳು
ಪ್ರಾಣಿಗಳ ಚರ್ಮ
ಮೊದಲಾದ ಗುಜರಿ ಸಾಮಾನುಗಳ ವ್ಯಾಪಾರ
ಗ್ಯರಾಜ್
ವಾಷ್ ಅಂಡ್ ಸರ್ವೀಸ್ ಸೆಂಟರ್
ಪಂಚರ್ ಶಾಪ್
ಸೈಕಲ್ ಶಾಪ್
ಛರ್ತಿ ರಿಪೇರಿ
ಬೀಗ ರಿಪೇರಿ
ಗಾಡ್ರೆಜ್ ಬೀರು
ಹಮಾಲಿ ಕೆಲಸ
ಡ್ರೈವಿಂಗ್
ಮೊದಲಾದ ವೃತ್ತಿಗಳು
ಬೀಡಿ ಕಟ್ಟುವುದು
ಮಂಡಕ್ಕಿ ಭಟ್ಟಿ
ಟಿಂಬರ್ ಕೆಲಸ
ವೆಲ್ಡಿಂಗ್ ವರ್ಕ್ಸ್
ಇತ್ಯಾದಿ ಇತ್ಯಾದಿ ಇತ್ಯಾದಿ ಇವೆಲ್ಲವನ್ನೂ ಆ ಸಮುದಾಯ ನಿಲ್ಲಿಸಿ ಬಿಟ್ಟರೆ ಒಂದಿಡೀ ವ್ಯವಸ್ಥೆ ಅಸ್ತವ್ಯಸ್ಥವಾಗಿ ಬಿಡುತ್ತದೆ. ದೇಶದ ಸ್ವಾಶಕೋಶವೇ ಅಸ್ತವ್ಯಸ್ತವಾಗುವುದನ್ನು ನೆನಪಿಸಿಕೊಳ್ಳಿ. ಮುಸ್ಲಿಮರೆಂದರೆ ಇಂತವನ್ನೆಲ್ಲ ಮಾಡುವ ಕೀಳು ಜನರೆಂದು ನಾನಿಲ್ಲಿ ಹೇಳುತ್ತಿಲ್ಲ. ದುಡಿದೇ ತಿನ್ನು ಎನ್ನುವ ಇಸ್ಲಾಮಿನ ಭೋದನೆ ಕಾಯಕವೇ ಕೈಲಾಸವೆಂಬ ಶರಣರ ಭೋದನೆಯೇ ಆಗಿದೆ.
ಕಾಯಕದಲ್ಲಿ ಕೀಳು ಮೇಲು ಎಣಿಸದೆ ಇಂತಹ ವೃತ್ತಿಗಳಲ್ಲಿ ತೊಡಗಿಕೊಂಡ ಸಮುದಾಯ ಅದು. ಭೂಮಿಯ ಬಲವಿಲ್ಲದ ವ್ಯಾಪಾರ ಕೈಕೆಲಸಗಳೇ ಆಸ್ತಿಯಾಗಿರುವ ಅದರ ನೆರವಿನಿಂದಲೇ ಇಡೀ ಭಾರತದ ಎಲ್ಲಾ ಸಮುದಾಯಗಳ ಆರ್ಥಿಕ ಪರಿಸ್ಥಿತಿಯ ಏಳುಬೀಳುಗಳ ಮೇಲೆ ಪರಿಣಾಮ ಬೀರಬಲ್ಲ ವರ್ಗ. ಹಿಂದೂಗಳಲ್ಲಿರುವ ನೂರಾರು ಜಾತಿಗಳ ಹಾಗೆ ನಮಗೆ ಅಲ್ಲಿಗೆ ಸೇರಿಸಿ ಇಲ್ಲಿಗೆ ಸೇರಿಸಿ ಅಸ್ಟು ಪರ್ಸೆಂಟ್ ಮೀಸಲಾತಿ ಕೊಡಿ ಇಷ್ಟು ಪರ್ಸೆಂಟ್ ಮೀಸಲಾತಿ ಕೊಡಿ ಎಂದು ಬೀದಿ ಹೋರಾಟವನ್ನಾಗಲಿ ಧರಣಿ ಮೊದಲಾದವನ್ನಾಗಲಿ ಈ ವರೆಗೆ ಮಾಡಲಿಲ್ಲ.
ಲಿಂಗಾಯತರು ಪ್ರತ್ಯೇಕ ಧರ್ಮದ ಹೋರಾಟಕ್ಕೆ ತೊಡಗಿದಾಗಲೂ ಅಲ್ಪಸಂಖ್ಯಾತರ ಪಟ್ಟಿ ಒಳಗೆ ಅವರು ಬಂದರೆ ನಮಗೆ ಅನ್ಯಾಯವಾಗುತ್ತದೆ ಎಂದಾಗಲೀ, ಜೈನರು ಅಲ್ಪಸಂಖ್ಯಾತರೆಂದು ಸರ್ಕಾರ ಸ್ಥಾನಮಾನ ನೀಡಿದಾಗಲಾಗಲೀ ಅವರು ಅದರ ವಿರುದ್ಧ ತುಟಿ ಪಿಟಕ್ ಎನ್ನಲಿಲ್ಲ. ಪ್ರತಿ ನಿತ್ಯ ಅವರ ಮೇಲೆ ನಾನಾ ಬಗೆಯ ದಾಳಿ ಹಿಂಸೆ ಅವಮಾನಗಳಾಗುತ್ತಿದ್ದರೂ ಸಹಿಸಿಕೊಂಡು ಕೂತಿದ್ದಾರೆ.
ಅವರು ಮುನಿದರೆ ಹಸಿವಿನಿಂದ ಸತ್ತರೂ ಸರಿ ವ್ಯಾಪಾರ ವ್ಯವಹಾರ ನಿಲ್ಲಿಸುತ್ತೇವೆಂದು ಘೋಷಿಸಿದರೆ, ಅಥವಾ ಇವರು ಹೇಳುವಂತೆ ಪಾಕಿಸ್ಥಾನಕ್ಕೊ ಇನ್ನೆಲ್ಲಿಗೋ ಹೊರಟೇ ಬಿಟ್ಟರೆ (ಇದು ಅಸಾಧ್ಯ) ಈ ಕೇಸರಿ ಶಾಲಿನ ಹಿಂದೂ ಧರ್ಮ ದ್ರೋಹಿಗಳು ಹಿಂದೂಗಳ ಕುಸಿದು ಬೀಳುವ ಜೀವನವನ್ನು ರಕ್ಷಿಸಲಾರರು. ಒಂದು ಕೇಜಿ ದ್ರಾಕ್ಷಿ ಕೊಳ್ಳುವ ಯೋಗ್ಯತೆ ಇಲ್ಲದವರು ಇನ್ನು ನಷ್ಟಕ್ಕೊಳಗಾಗುವ ಹಿಂದೂ ರೈತರನ್ನು ಅವರ ಉತ್ಪನ್ನವನ್ನು ಖರೀದಿಸಿ ಹೇಗೆ ರಕ್ಷಿಸಿಯಾರು?
ಭಾರತ ಒಂದು ಶರಿರವಿದ್ದಂತಿದೆ. ಶರೀರದ ಪ್ರಮುಖವಾದ ಯಾವುದಾದರೊಂದು ಅಂಗ ವೈಫಲ್ಯವಾದರೂ ಸಾವು ನಿಶ್ಚಿತ. ಕಿಡ್ನಿ ಕಳೆದುಕೊಂಡ ಶರೀರಕ್ಕೆ ಎಸ್ಟು ದಿನ ಡಯಾಲಲಿಸಿಸ್ ಮಾಡಿಸಲು ಸಾಧ್ಯ? ಲಿವರ್ ಸುಟ್ಟು ಹೋದ ಶರೀರ ಎಷ್ಟು ದಿನ ಬದುಕಿರಲು ಸಾಧ್ಯ? ಕಣ್ಣು ಕೈ ಕಾಲು ಸ್ವಾಧೀನವಿಲ್ಲದ ಶರೀರ ಎಸ್ಟು ಪ್ರಕಾಶಿಸೀತು? ಹೃದಯದ ಬೈಪಾಸ್ ಸರ್ಜರಿಯಾದ ಶರೀರದ ದೇಹ ಅನಿಶ್ಚಿತ. ನಮ್ಮ ದೇಶ ಬಹು ಅಂಗಾಂಗ ವೈಫಲ್ಯಕ್ಕೆ ಗುರಿಯಾಗುವ ಮುನ್ನ ಎಚ್ಚರ ಗೊಂಡರೆ ಒಳಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243