ದಿನದ ಸುದ್ದಿ

ನನ್ನ ಪತ್ನಿಗೆ ವೆಂಟಿಲೇಟರ್ ಕೊಡಿಸಲು ಸಾಧ್ಯವಾಗ್ತಿಲ್ಲ : ಗದ್ಗದಿತರಾದ ಮೈಸೂರು ಡಿಎಚ್ಓ ಅಮರನಾಥ್

Published

on

ಸುದ್ದಿದಿನ,ಮೈಸೂರು: ನನ್ನ ಹೆಂಡತಿಗೂ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ ಮೈಸೂರು ಡಿಹೆಚ್‌ಒ ಅಮರನಾಥ್ ಗದ್ಗದಿತರಾದರು.

ರೋಗಿಯ ಸಂಬಂಧಿಕರ ಜತೆಗೆ ಫೋನ್ ಸಂಭಾಷಣೆ ಮಾಡಿರುವ ಡಿಎಚ್ಓ ಅವರ ಅಮರನಾಥ್ ಆಡಿಯೋವೈರಲ್ ಆಗಿದೆ. ವ್ಯಕ್ತಿಯೊಬ್ಬ ಅಮರನಾಥ್ ಅವರಿಗೆ ವೆಂಟಿಲೇಟರ್ ಕೊಡಿಸಿ ಎಂದು ಫೋನ್ ಮಾಡಿದ್ದ. ಈ ವೇಳೆ ಡಿಹೆಚ್ಒ, ವಾರ್ ರೂಂ ಗೆ ಕರೆ ಮಾಡಿ ಅಲ್ಲಿ ಅರೆಂಜ್ ಮಾಡಿಕೊಡುತ್ತಾರೆ ಎಂದು ಹೇಳಿದ್ದಾರೆ.

ಆಗ ವ್ಯಕ್ತಿ, ಅವರು ರೆಸ್ಪಾಂಡ್ ಮಾಡುತ್ತಿಲ್ಲ ಎಂದರು. ಬೆಡ್ ಗು ನನಗೂ ಸಂಬಂಧ ಇಲ್ಲ. ನನಗೆ ಬೆಡ್ ಕೊಡಿಸಲು ಆಗಲ್ಲ, ನನ್ನ ಹೆಂಡತಿಗೂ ಬೆಡ್ ಕೊಡಿಸಲು ಯೋಗ್ಯತೆ ಇಲ್ಲ. ನನ್ನ ಕೈ ಸೋತೋಗಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಇದನ್ನೂ ಓದಿ | ವಾಹನ ಸವಾರರಿಗೆ ಮತ್ತೆ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ಬಿಸಿ

ಆಗ ವ್ಯಕ್ತಿ ನಿಮಗೆ ಜವಾಬ್ದಾರಿ ಏಕೆ ಕೆಲಸ ಬಿಟ್ಟೋಗಿ ಅಂದಿದ್ದಾರೆ. ಕೆಲಸದಿಂದ ಕಳುಹಿಸಿ ಬಿಟ್ಟೋಗಲು ರೆಡಿ ಇದ್ದೇನೆ ಎಂದಿರುವ ಡಿ.ಎಚ್.ಓ, ನನ್ನ ಮೇಲೆ ಯಾವುದೇ ಆಕ್ಷನ್ ತೆಗೆದುಕೊಳ್ಳಲಿ. ನಾನು ಮನೆಗೆ ಹೋಗಲು ರೆಡಿ ಇದ್ದೇನೆ. ನನ್ನ ಕೈಯಲ್ಲಿ ಬೆಡ್ ಕೊಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version