ದಿನದ ಸುದ್ದಿ
ವಿಡಿಯೋ |’ಕಬ್ಬಿಣದ ಸರಪಳಿ ಹರಿತಲೇ ಪರಾಕ್’ : ಮೈಲಾರ ಲಿಂಗೇಶ್ವರ ಕಾರ್ಣಿಕ
ಸುದ್ದಿದಿನ, ಹಾವೇರಿ : ‘ಕಬ್ಬಿಣದ ಸರಪಳಿ ಹರಿತಲೇ ಪರಾಕ್’ ಎಂದು ಈ ವರ್ಷದ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕ ನುಡಿದರು ಗೊರವಪ್ಪ ರಾಮಪ್ಪ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ವರ್ಷದ ಕಾರ್ಣಿಕ
ದೈವವಾಣಿ ನುಡಿದ ಗೊರವಪ್ಪ ರಾಮಪ್ಪ,
ನಾಡಿನ ಐತಿಹಾಸಿಕ ಪೌರಾಣಿಕ ಹಿನ್ನೆಲೆಯ ಶ್ರೀಮೈಲಾರ ಕ್ಷೇತ್ರ ಕೃಷಿ, ರಾಜಕೀಯ, ಆರ್ಥಿಕತೆಗೆ ಸಂಬಂಧಿಸಿದ ವರ್ಷದ ದೈವವಾಣಿ ಕಾರ್ಣಿಕದ ವಿಶ್ಲೇಷಣೆ ಮಾಡದೇ ಹೊರಟರು ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್.
ಭಕ್ತರಲ್ಲಿ ಗೊಂದಲ ಮೂಡಿಸಿದ ಕಾರ್ಣಿಕದ ನುಡಿ
ಭಕ್ತರಲ್ಲಿ ಗೊಂದಲ ಮೂಡಿಸಿದ ಕಾರ್ಣಿಕದ ನುಡಿ
‘ಕಬ್ಬಿಣದ ಸರಪಳಿ ಹರಿತಲೇ ಪರಾಕ್’ ಈ ವರ್ಷದ ಕಾರ್ಣಿಕ ನುಡಿ.
ಕಾರ್ಣಿಕ ನುಡಿ ನುಡಿದ ಗೊರವಪ್ಪ ರಾಮಣ್ಣ ಕಾರ್ಣಿಕದಲ್ಲಿ ಸ್ಪಷ್ಟತೆ ಇಲ್ಲಾ ಎಂದ ಧರ್ಮ ದರ್ಶಿ ವೆಂಕಪ್ಪ ಒಡೆಯರು, ನಿಯಮದ ಪ್ರಕಾರ ಧರ್ಮದರ್ಶಿಗಳು ಕಾರ್ಣಿಕ ನುಡಿಯುವ ಗೊರವಪ್ಪ ರಾಮಣ್ಣನಿಗೆ ಕಂಕಣ ಕಟ್ಟಿ ಆಶೀರ್ವಾದ ಮಾಡಬೇಕಿತ್ತು.
ಅದರೆ ಅಧಿಕಾರಿಗಳು ನಿಯಮಗಳನ್ನು ಮೀರಿ ಕಂಕಣ ಕಟ್ಟಿದ್ದಾರೆ ಎಂದರು.
ಆದರೂ ಭಕ್ತರ ನಂಬಿಕೆ ದಕ್ಕೆ ಯಾಗಬಾರದು ಅಂತಾ ಕಾರ್ಣಿಕ ವೀಷ್ಲೇಶಣೆ ಮಾಡುತ್ತೇನೆ.
ಈ ಕಾರ್ಣಿಕದ ಪ್ರಕಾರ ಈ ವರ್ಷ ಮಳೆ ಇಲ್ಲದೆ ರೈತರು ಕಂಗಾಲಾಗುತ್ತಾರೆ. ರಾಜ್ಯದಲ್ಲಿ ಸಮೀಶ್ರ ಸರ್ಕಾರ ಪತನವಾಗುತ್ತದೆ. ರಾಜಕೀಯ ಪಕ್ಷಗಳ ಮಧ್ಯೆ ಹೊಂದಾಣಿಕೆ ಇಲ್ಲದಂತ್ತಾಗುತ್ತೆ. ಕೇಂದ್ರದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ.ಸಮ್ಮಿಶ್ರ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಮೈಲಾರದ ಧರ್ಮದರ್ಶಿ ವೆಂಕಪ್ಪ ಒಡೆಯರ್ ಅವರು ಕಾರ್ಣಿಕ ತಾತ್ಪರ್ಯ ವಿವರಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401