ದಿನದ ಸುದ್ದಿ
ಸಾಲ ಬಾದೆ ತಾಳಲಾರದೆ ರೈತ ಆತ್ಮಹತ್ಯೆ
ಸುದ್ದಿದಿನ,ಮೈಸೂರು: ಲಾಕ್ ಡೌನ್ ಸಂದರ್ಭದಲ್ಲಿ ಸಾಲ ಹಿಂತಿರುಗಿಸಲಾಗಿದೆ ಮಾನಸಿಕವಾಗಿ ಕುಗ್ಗಿ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಗಂಗಡ ಹೊಸಹಳ್ಳಿ ರೈತ ಮಂಜೇಗೌಡ(40) ಜಮೀನು ಬಳಿ ವಿಷ ಸೇವಿಸಿ ಆತ್ಮಹತ್ಯೆಮಾಡಿಕೊಂಡಿದ್ದಾರೆ.
ತನ್ನ 4 ಎಕರೆ ಜಮೀನಿನಲ್ಲಿ ಬೆಳೆ ಬೆಳೆಯುವ ಸಲುವಾಗಿ ಕೈ ಸಾಲ ಹಾಗೂ ತಾಯಿ ಹೆಸರಿನಲ್ಲಿ ವ್ಯವಸಾಯ ಸೇವ ಸಹಕಾರ ಬ್ಯಾಂಕ್ ನಲ್ಲಿ 4 ರಿಂದ 5 ಲಕ್ಷ ರೂಪಾಯಿ ಸಾಲ ಪಡೆದಿದ್ದ ರೈತ ಮಂಜೇಗೌಡ. 2ವರ್ಷದಿಂದ ಯಾವುದೇ ಫಸಲು ಬಾರದೇ ನಷ್ಟ ಅನುಭವಿಸಿದ್ದರು ಇವರು ಓರ್ವ ಪತ್ನಿ ಹಾಗೂ 9ಮತ್ತು 10 ವರ್ಷದ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದ ಹೆಚ್.ಡಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243