ದಿನದ ಸುದ್ದಿ
ಶುಭ ಸುದ್ದಿ: ಆ 21ರಿಂದ ಅಗ್ಗದ ಬೆಲೆಯಲ್ಲಿ ಮೈಸೂರು ಸಿಲ್ಕ್ ಸೀರೆ ಮಾರಾಟ !
ಸುದ್ದಿದಿನ ಡೆಸ್ಕ್: ಮಹಿಳೆಯರು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದಿನಗಳು ಹತ್ತಿರ ಬಂದಿವೆ. ಅಗ್ಗದ ಬೆಲೆಯಲ್ಲಿ ಮೈಸೂರು ಸಿಲ್ಕ್ ಸೀರೆ ಸಿಗುವುದು ಯಾವಗ ಎಂದು ಕಾಯುತ್ತಿದ್ದ ಸೀರೆ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ.
ಆಗಸ್ಟ್ 21ರಿಂದ ಮೈಸೂರು, ಬೆಂಗಳೂರು, ಚನ್ನಪಟ್ಟಣ ಹಾಗೂ ದಾವಣಗೆರೆಯಲ್ಲಿ ಅಗ್ಗದ ಮೈಸೂರು ರೇಷ್ಮೆ ಸೀರೆಗಳ ಮಾರಾಟ ಪ್ರಾರಂಭವಾಗುವುದಾಗಿ ರೇಷ್ಮೆ ಸಚಿವ ಸಾರಾ ಮಹೇಶ್ ಅವರು ಖಚಿತಪಡಿಸಿದ್ದಾರೆ.
ಆಗಸ್ಟ್ 21ರಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಈ ಸೇಲ್‍ಗೆ ಚಾಲನೆ ನೀಡಲಿದ್ದಾರೆ.
ರೇಷ್ಮೆ ಸೀರೆ ಖರೀದಿಸಲು ಬಯಸಿದವರು ತಮ್ಮ ಆಧಾರ್ ಕಾರ್ಡ್ ನೀಡುವುದು ಕಡ್ಡಾಯ. ಒಬ್ಬರಿಗೆ ಒಂದು ಸೀರೆ ಮಾತ್ರ ಮಾರಾಟ ಮಾಡಲಾಗುತ್ತದೆ. ಮೊದಲು ಬಂದವರಿಗೆ ಆದ್ಯತೆ ಹಾಗೂ ಒಮ್ಮೆ ರೇಷ್ಮೆ ಸೀರೆ ಖರೀದಿಸಿದವರು ಮುಂದಿನ ಐದು ವರ್ಷಗಳ ಕಾಲ ಈ ಆಫರ್‍ಗೆ ಅರ್ಹರಾಗಿರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮೈಸೂರು ರೇಷ್ಮೆ ಸೀರೆಗಳ ಮೂಲ ಬೆಲೆ 9500 ರೂಪಾಯಿಗಳಾಗಿವೆ. ಆದರೆ, ಆಫರ್‍ನಲ್ಲಿ ಅರ್ಧ ಬೆಲೆಗೆ ನೀಡಲಾಗುತ್ತಿದೆ. ಮೈಸೂರು ಸಿಲ್ಕ್‍ನ ಬ್ರ್ಯಾಂಡ್‍ಅನ್ನು ಇನ್ನಷ್ಟು ಪ್ರಸಿದ್ಧಗೊಳಿಸಲು ಇಲಾಖೆ ಈ ನಿರ್ಣಯ ಕೈಗೊಂಡಿದೆ.