ದಿನದ ಸುದ್ದಿ

ಮೈಸೂರು ದಸರಾ | ಅಂಬಾರಿ ಹೊತ್ತ ಅಭಿಮನ್ಯು ಜಂಬೂ ಸವಾರಿ

Published

on

ಸುದ್ದಿದಿನಡೆಸ್ಕ್:ಮೈಸೂರು ದಸರಾ ಅಂಗವಾಗಿ ಶನಿವಾರ ವಿಜಯದಶಮಿಯಂದು ಅದ್ಧೂರಿ ಜಂಬೂ ಸವಾರಿ ನಡೆಯಿತು. ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾದಾಗಿನಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಮೈಸೂರಿನ ಜಂಬೂಸವಾರಿಯಲ್ಲಿ 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗಿದನು. ಈ ಉತ್ಸವವನ್ನು ಸಾವಿರಾರು ಜನರು ಕಣ್ಣು ತುಂಬಿಸಿಕೊಂಡಿದ್ದಾರೆ.

ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಮಧ್ಯಾಹ್ನ 1:55ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

ವಿಶ್ವವಿಖ್ಯಾತ ಜಂಬೂಸವಾರಿಯ ಸಲುವಾಗಿ ಅಭಿಮನ್ಯು ಆನೆ 750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ರಾಜಬೀದಿಗಳಲ್ಲಿ ಹೆಜ್ಜೆ ಹಾಕಿದನು. ಈ ಐತಿಹಾಸಿಕ ಕ್ಷಣವನ್ನು ದೇಶ- ವಿದೇಶ ಮತ್ತು ನೆರೆಹೊರೆಯ ಜಿಲ್ಲೆಯ ಲಕ್ಷಾಂತರ ಮಂದಿ ಕಣ್ಣುಂಬಿಕೊಳ್ಳಲು ರಾಜ ಬೀದಿಗಳಲ್ಲಿ ಕಿಕ್ಕಿರಿದು ಸೇರಿದ್ದರು.

ಈ ಜಂಬೂಸವಾರಿ ವೀಕ್ಷಣೆಗೆ ಅರಮನೆಯ ಆವರಣದಲ್ಲಿ 40 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೂ ಅರಮನೆಯ ಬಳಿಕ ಚಿಕ್ಕ ಗಡಿಯಾರ, ಕೆ.ಆರ್.ಆಸ್ಪತ್ರೆ ಹಾಗೂ ಬನ್ನಿಮಂಟಪದ ರಸ್ತೆಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಜಂಬೂಸವಾರಿ ಸಾಗುವ ಸಮಯದಲ್ಲಿ ಸಾರ್ವಜನಿಕರು ಡಾ.ರಾಜ್‌ಕುಮಾರ್ ಪಾರ್ಕ್‌ನ ಮರಗಳ ಮೇಲೆ ಹಾಗೂ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version