ರಾಜಕೀಯ
ಯಾವುದೇ ಆಮಿಷಗಳಿಗೆ ಒಳಗಾಗಿ ಬಿಜೆಪಿಗೆ ಸೇರಿಲ್ಲ ; ಸಚಿವ ಸ್ಥಾನ ಕೊಟ್ಟರೆ ಬೇಡ ಅನ್ನಲ್ಲ : ಎನ್. ಮಹೇಶ್
ಸುದ್ದಿದಿನ,ಹಾಸನ: ನಾನು ಯಾವುದೇ ಆಮಿಷಗಳಿಗೆ ಒಳಗಾಗಿ ಬಿಜೆಪಿ ಪಾರ್ಟಿಗೆ ಸೇರಿಲ್ಲ.ಯಾವುದೇ ಷರತ್ತುಗಳನ್ನು ಕೂಡ ಪಕ್ಷಕ್ಕೆ ಹಾಕಿಲ್ಲ ಎಂದು ಹಾಕಿ ಮಾಜಿ ಸಚಿವ ಹಾಗೂ ಶಾಸಕ ಎನ್.ಮಹೇಶ್ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗೇ, ಸಚಿವ ಸ್ಥಾನ ಕೊಟ್ಟರೆ ನಾನು ಬೇಡ ಅನ್ನಲ್ಲ. ನನ್ನ ಬಳಸಿಕೊಂಡು ಅವಕಾಶ ಕೊಟ್ಟರೆ ದೊಡ್ಡ ಪ್ರಮಾಣದಲ್ಲಿ ಪಕ್ಷ ಸಂಘಟನೆ ಮಾಡಬಹುದು ಎಂದು ತಿಳಿಸಿದರು.
ಬಿಎಸ್‍ಪಿ ಪಕ್ಷದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ಮಾತನಾಡಿ, ನನ್ನನ್ನು ಬಿಎಸ್‍ಪಿಯಿಂದ ಉಚ್ಛಾಟನೆಯನ್ನು ಮಾಡದಿದ್ದರೆ ಅದೇ ಪಕ್ಷದಲ್ಲಿ ಮುಂದುವರಿಯುತ್ತಿದ್ದೆ. ಆದರೆ ಒಂದೇ ಭಾರಿ ನನ್ನನ್ನು ಕಟ್ ಮಾಡಿ ಬಿಸಾಕಿದ್ರು. ಮುಂದಿನ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಅವಕಾಶ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದಲ್ಲಿ ಪಕ್ಷ ಟಿಕೆಟ್ ನೀಡುವ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243