ಸಿನಿ ಸುದ್ದಿ

ನಟಸಾರ್ವಭೌಮ ವಿಜಯೋತ್ಸವ | ದಾವಣಗೆರೆ ನನ್ನ ಫೇವರೆಟ್ ಪ್ಲೇಸ್ ಗಳಲ್ಲೊಂದು ಎಂದ್ರು ಅಪ್ಪು..!

Published

on

ಸುದ್ದಿದನ, ದಾವಣಗೆರೆ: ನಟಸಾರ್ವಭೌಮ ಚಿತ್ರ 25 ದಿನ ಪೂರೈಸಿದ ಹಿನ್ನಲೆಯಲ್ಲಿ ನಗರಕ್ಕೆ ಆಗಮಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಮೂವರು ಒಟ್ಟಾಗಿ ಸಿನಿಮಾ ಮಾಡುತ್ತೇವೆ ಎಂದ ಅವರು, ನಟಸಾರ್ವಭೌಮ 25 ದಿನ ಪೂರೈಸಿದೆ. ಅದಕ್ಕಾಗಿ ದಾವಣಗೆರೆಗೆ ಭೇಟಿ ನೀಡಿದ್ದೇನೆ. ಅಲ್ಲದೆ, ದಾವಣಗೆರೆ ನನ್ನ ಪೇವರೆಟ್‌ ಪ್ಲೇಸ್‌ ನನಗೆ ಸಖತ್‌ ಇಷ್ಟ ಎಂದು ಹೇಳಿದರು.

ನಟ ಶಿವಣ್ಣ, ರಾಘಣ್ಣ ಹಾಗೂ ನಾನು ಒಟ್ಟಾಗಿ ಸಿನಿಮಾ ಮಾಡಬೇಕೆಂಬ ಆಸೆ ಬಹುದಿನಗಳದ್ದು. ಆದರೆ, ಅದಕ್ಕೆ ಟೈಮ್‌ ಇನ್ನೂ ಕೂಡಿ ಬಂದಿಲ್ಲ. ಮೂವರಿಗೂ ಒಪ್ಪುವ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇವೆ ಎಂದು ನಟ ಪುನೀತ್‌ ರಾಜ್‌ಕುಮಾರ್‌ ತಿಳಿಸಿದರು.

ಮಂಡ್ಯದಲ್ಲಿ ಚುನಾವಣೆಗೆ ಯಾರು ಸ್ಪರ್ಧಿಸಬೇಕು? ನಟಿ ಸುಮಲತ ಅವರಿಗೆ ಬೆಂಬಲ ನೀಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುನೀತ್‌, ನಟ, ನಟಿಯರ ರಾಜಕೀಯದ ಪ್ರವೇಶದ ಬಗ್ಗೆ ನಾನು ಏನೂ ಹೇಳೋಲ್ಲ, ನಾನೊಬ್ಬ ನಟ ಅಷ್ಟೆ, ನಮ್ಮ ಕುಟುಂಬ ಯಾವೂದೇ ಕಾರಣಕ್ಕೂ ರಾಜಕೀಯ ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲದೆ, ಯುವರತ್ನ ಚಿತ್ರೀಕರಣ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಎಂದರು.

ರೋಡ್ ಶೋ

ನಟ ಸಾರ್ವಭೌಮ ಚಿತ್ರ 25 ದಿನ ಪೂರೈಸಿದ ಹಿನ್ನಲೆಯಲ್ಲಿ ದಾವಣಗೆರೆಯಲ್ಲಿ ನಟ ಪುನಿತ್‌ ರಾಜಕುಮಾರ್‌ ಆಗಮಿಸಿ ಕೇಂದ್ರ ಬಸ್‌ ನಿಲ್ದಾಣದಿಂದ ಚಿತ್ರಮಂದಿರದವರೆಗೆ ರೋಡ್‌ ಮಾಡಬೇಕೆಂದಿದ್ದರು. ಆದರೆ, ಹೊಸಬಸ್‌ ನಿಲ್ದಾಣದೆದುರು ರೋಡ್‌ ಶೋ ವಾಹನ ಏರುತ್ತಿದ್ದಂತೆ ಅಭಿಮಾನಿಗಳು ಮುತ್ತಿಕೊಂಡು, ತಳ್ಳಾಟ, ನೂಕಾಟ ಆರಂಭಿಸಿದರು. ಇದರಿಂದ ಅನಿವಾರ್ಯವಾಗಿ ಪೊಲೀಸರು ಲಾಠಿ ಬೀಸಿ, ಅಭಿಮಾನಿಗಳನ್ನು ಚದುರಿಸಿದರು. ನಂತರ ತುಸುಕಾಲ ರೋಡ್‌ ಶೋ ನಡೆಸಿ, ನೇರವಾಗಿ ಗೀತಾಂಜಲಿ ಚಿತ್ರಮಂದಿರಕ್ಕೆ ಆಗಮಿಸಿದರು. ಆದರೆ, ಅದಾಗಲೇ ಮೂರ್ನಾಲ್ಕು ಗಂಟೆಗಳ ಕಾಲ ಕಾದಿದ್ದ ಅಭಿಮಾನಿಗಳು ಪುನೀತ್‌ ರಾಜ್‌ಕುಮಾರ್‌ ಕಾರಿನಿಂದ ಇಳಿಯುತ್ತಿದ್ದಂತೆ ಮತ್ತೆ ಮುತ್ತಿಗೆ ಹಾಕಿದರು.

ನೂಕಾಟ, ತಳ್ಳಾಟ ಹೆಚ್ಚಾಯಿತು. ಬೆರಳೆಣಿಕೆಯಷ್ಟಿದ್ದ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲಾಗದೇ ಲಾಠಿ ಜಾರ್ಜ್‌ ನಡೆಸಿದರೂ ಅಭಿಮಾನಿಗಳು ನಿಯಂತ್ರಣಕ್ಕೆ ಬರಲಿಲ್ಲ. ಇದರಿಂದ ಬೇಸತ್ತ ನಟ ಪುನೀತ್‌ರಾಜ್‌ಕುಮಾರ್‌ ಚಿತ್ರಮಂದಿರದ ಒಳಕ್ಕೂ ಹೋಗದೇ, ಅಭಿಮಾನಿಗಳೊಂದಿಗೆ ಮಾತೂ ಆಡದೇ ಕಾರ್‌ ಏರಿ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿದರು.

ಈ ಸಂದರ್ಭ ನಿರ್ಮಾಪಕ ಪವನ್‌ ಒಡೆಯರ್‌, ಶಿವರಾಜ್‌ಕುಮಾರ್‌ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಯೋಗೀಶ್‌, ಗೌರವಾಧ್ಯಕ್ಷ ಬಿ. ವಾಸುದೇವ್‌, ಕಾರ್ಯದರ್ಶಿ ಪ್ರಕಾಶ್‌, ದುರ್ಗೇಶ್‌ ಮತ್ತಿತರರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version