ದಿನದ ಸುದ್ದಿ
ರಾಷ್ಟ್ರೀಯ 2021ನೇ ಸಾಲಿನ ಲೋಹಶಾಸ್ತ್ರಜ್ಞ ಪ್ರಶಸ್ತಿ ಸಮಾರಂಭ ಆಯೋಜನೆ
ಸುದ್ದಿದಿನ ಡೆಸ್ಕ್ : ಕಬ್ಬಿಣ ಮತ್ತು ಉಕ್ಕು ಕ್ಷೇತ್ರದಲ್ಲಿ ಲೋಹಶಾಸ್ತ್ರಜ್ಞರು ಮತ್ತು ಎಂಜಿನಿಯರ್‌ಗಳ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಉಕ್ಕು ಸಚಿವಾಲಯ ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿ 2021 ಅನ್ನು ಆಯೋಜಿಸಿದೆ. ಉಕ್ಕು ಖಾತೆ ಸಚಿವ ರಾಮಚಂದ್ರ ಪ್ರಸಾದ್ ಸಿಂಗ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಪ್ರಶಸ್ತಿಗಳನ್ನು ತರ್ಕಬದ್ಧಗೊಳಿಸುವ ಕುರಿತು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ವಿಸ್ತೃತ ಚರ್ಚೆಯ ನಂತರ ಉಕ್ಕು ಸಚಿವಾಲಯ, ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿಯನ್ನು ಸ್ಥಾಪಿಸಿದೆ.
ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿ 2021ಕ್ಕಾಗಿ ಅರ್ಜಿಗಳು ಅಥವಾ ನಾಮನಿರ್ದೇಶನಗಳ ಸಲ್ಲಿಕೆ ಪ್ರಕ್ರಿಯೆಯನ್ನು ಕಳೆದ ವರ್ಷ ಆಗಸ್ಟ್‌ನಿಂದ ಆರಂಭಿಸಿ ಸೆಪ್ಟೆಂಬರ್‌ವರೆಗೆ ಗಡುವು ನೀಡಲಾಗಿತ್ತು. ಜೀವಮಾನ ಸಾಧನೆ, ರಾಷ್ಟ್ರೀಯ ಲೋಹಶಾಸ್ತ್ರಜ್ಞ, ಕಬ್ಬಿಣ ಮತ್ತು ಉಕ್ಕಿನ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಮತ್ತು ಯುವ ಲೋಹಶಾಸ್ತ್ರಜ್ಞರಂತಹ ವಿಭಾಗಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243