ದಿನದ ಸುದ್ದಿ
ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಕೋಳಿ ಪೀಸೇ ಸಿಗಲಿಲ್ವಂತೆ !
ಸುದ್ದಿದಿನ ಡೆಸ್ಕ್: ಮಂಡ್ಯದ ಮಂಗಲ ಗ್ರಾಂದಲ್ಲಿ ಭಾನುವಾರ ನಡೆದ ನಾಟಿಕೋಳಿ ಸಾರಲ್ಲಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜನರು ತಮ್ಮ ಎಲೆಯಲ್ಲಿ ಪೀಸ್ ಸಿಗಲಿಲ್ಲ ಎಂದು ಬೇಸರಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಸಿಕ್ಕಿದ್ದರಿಂದ ರಾಜ್ಯದ ನಾನಾ ದಿಕ್ಕುಗಳಿಂದ ಮಂಡ್ಯಕ್ಕೆ ಬಂದ ನಾಟಿಕೋಳಿ ಸಾರು ಪ್ರಿಯರು ಕ್ಯೂನಲ್ಲಿ ನಿಂತು ಬಾಡೂಟಕ್ಕೆ ಕುಳಿತರು. ಟಿಕೆಟ್ ದರ ನೂರು ರೂ. ವಿಧಿಸಿದ್ದರೂ, ಲೆಕ್ಕಿಸದೆ ಜಮಾಯಿಸಿದ ಜನರು ಪಂಕ್ತಿಯಲ್ಲಿ ಕುಳಿತು ನಾಟಿಕೋಳಿ ಸಾರಿನೊಂದಿಗೆ ಮುದ್ದೆ ಉಂಡರು. ಭಾನುವಾರವಾದ್ದರಿಂದ ಜನಸ್ತೋಮ ಹೆಚ್ಚಾಗಿತ್ತು. ಕೆಲ ಪಂಕ್ತಿಯಲ್ಲಿ ಕುಳಿತ ಜನರು ತಮಗೆ ಸರಿಯಾಗಿ ಮಾಂಸದ ಪೀಸ್ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
6 ಮುದ್ದೆ ಉಂಡ ಮೀಸೆ ಈರೇಗೌಡ !
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ 54 ವರ್ಷದ ಮೀಸೆ ಈರೇಗೌಡ ಅವರು 20 ನಿಮಿಷಗಳಲ್ಲಿ ಮೂರು ಕೆ.ಜಿ. ತೂಗುವ ಆರು ಮುದ್ದೆ ಉಣ್ಣುವ ಮೂಲಕ ಪ್ರಥಮ ಸ್ಥಾನ ಗಳಿಸಿದರು. ಈ ಮೂಲಕ ಅವರು ಐದು ಸಾವಿರ ನಗದು ಹಾಗೂ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಈ ಮೂಲಕ ಅವರು ಒಂಬತ್ತನೇ ಬಾರಿ ಚಾಂಪಿಯನ್‍ಶಿಪ್ ತಮ್ಮದಾಗಿಸಿಕೊಂಡರು.