ಕ್ರೀಡೆ

ಹೊಸ ಇತಿಹಾಸ ಸೃಷ್ಟಿಸಿದ ಪಿ.ವಿ. ಸಿಂಧು ಗೆ ಹರಿದು ಬಂತು ಅಭಿಮಾನದ ಹೊಳೆ

Published

on

ಸುದ್ದಿದಿನ ಡೆಸ್ಕ್ : ನಮ್ಮ ದೇಶದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರು ವಿಶ್ವದ ಪ್ರತಿಷ್ಟಿತ ಬಿ.ಡಬ್ಲ್ಯೂ.ಎಫ್ ಪಂದ್ಯಾವಳಿಯಲ್ಲಿ ಜಯಗಳಿಸುವುದರ ಮೂಲಕ, ಆ ಜಯ ಸಾಧಿಸಿದ ಪ್ರಥಮ ಭಾರತೀಯರೆಂಬ ಹೊಸ ಕೀರ್ತಿಗೆ ಪಾತ್ರರಾಗಿದ್ದಾರೆ.

ಚೀನಾದ ಗುಯಾಂಗ್ಸು ಎಂಬಲ್ಲಿ ಇಂದು ನಡೆದ ಫೈನಲ್ ಪಂದ್ಯದಲ್ಲಿ ಸಿಂಧು ಅವರು ಜಪಾನಿನ ನೊಜೋಮಿ ಓಕುರಾ ಅವರನ್ನು 21-19, 21-17 ಅಂತರದಲ್ಲಿ ಮಣಿಸಿ ಈ ಇತಿಹಾಸ ನಿರ್ಮಿಸಿದ್ದಾರೆ.

ಈ ವರೆಗೆ ಪಿ.ವಿ.ಸಿಂಧು ಅವರು ಒಲಂಪಿಕ್ ಪದಕ, ಕಾಮನ್ವೆಲ್ತ್ ಗೇಮ್ಸ್ ಪದಕ, ಏಷ್ಯನ್ ಗೇಮ್ಸ್ ದ್ವಿತೀಯ ಸ್ಥಾನ, ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ದ್ವಿತೀಯ ಸ್ಥಾನ ಮುಂತಾದ ಸಾಧನೆಗಳನ್ನು ಮಾಡಿದ್ದು ಈ ಗೆಲುವಿನ ಮುಕೇನ ಭಾರತೀಯರಲ್ಲಿ ಮತ್ತಷ್ಟು ಹೆಮ್ಮೆ ಮೂಡಿಸಿದ್ದಾರೆ. ನಮ್ಮ ಈ ಭಾರತೀಯ ಕುವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಅಭಿಮಾನ ಪೂರ್ವಕ ಮೆಚ್ಚುಗೆಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version