ದಿನದ ಸುದ್ದಿ
ಡಿ ಬಾಸ್ ನ ಈ ಪುಟ್ಟ ಅಭಿಮಾನಿಯ ದಾರುಣ ಪರಿಸ್ಥಿತಿಯನ್ನ ನೋಡಿದ್ರೆ ನೀವು ಕಣ್ಣೀರು ಹಾಕ್ದೆ ಇರಲ್ಲ..!
ಈ ಮಗುವಿಗೆ ನಟ ದರ್ಶನ್ ಅಂದ್ರೆ ಪಂಚಪ್ರಾಣ, ದರ್ಶನ್ ಅಭಿನಯದ ಎಲ್ಲಾ ಚಿತ್ರಗಳನ್ನ ಸಹ ನೋಡಿದ್ದಾನೆ. ಜೊತೆಗೆ ದರ್ಶನ್ ಅಭಿನಯದ ಪೊಲೀಸ್ ಪಾತ್ರಗಳನ್ನ ಮಾಡುವುದು ತಾನು ಪೊಲೀಸ್ ಆಗಬೇಕು ಎಂಬ ಭಯಕೆಯನ್ನ ಸಹ ಹೊಂದಿದ್ದಾನೆ. ಆದ್ರೆ ವಿಧಿ ಲಿಖಿತ ಹಾಗೂ ವೈದ್ಯರು ಮಾಡಿದ ಯಡವಟ್ಟಿನಿಂದ ಈಗ ತನ್ನೆರಡು ಕಾಲುಗಳನ್ನ ಕಳೆದುಕೊಂಡು ಒಂದು ಮೂಲೆಯಲ್ಲಿ ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕು ಆ ಮಗುವಿಗೆ ಆಗಿದ್ದಾದರು ಏನು? ಈ ಸ್ಟೋರಿ ನೋಡಿ.
ಹರಳು ಉರಿದಂತೆ ನಟ ದರ್ಶನ್ ಡೈಲಗ್ ಹೊಡೆಯುತ್ತಿರುವ ಬಾಲಕ, ತನ್ನ ಮಗನ ವ್ಯವಸ್ಥೆ ಕಂಡು ಕಣ್ಣೀರು ಹಾಕುತ್ತಿರುವ ತಾಯಿ, ಸಂಬಂಧವಿಲ್ಲದ್ದಿದ್ದರು ಮರುಕ ಪಡುತ್ತಿರುವ ಜನರು. ಇಂತದೊಂದು ಸನ್ನಿವೇಶ ಕಂಡು ಬಂದದ್ದು ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎಡೆಹಳ್ಳಿ ಗ್ರಾಮದಲ್ಲಿ. ಎಡೆಹಳ್ಳಿ ಗ್ರಾಮದ ಕುರುವತ್ತಪ್ಪ ಹಾಗೂ ನೇತ್ರಾ ಎಂಬುವರ ಎರಡನೇ ಮಗವೇ ಕೀರ್ತಿರಾಜ್, ಕಳೆದ ಒಂದು ವರ್ಷದ ಹಿಂದೆ ಬಾಲಕ ಕೀರ್ತಿರಾಜ್ ಗೆ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ಸ್ಥಳೀಯ ಆಸ್ಪತ್ರೆಗೆ ತೋರಿಸಿದ್ದರು ಏನು ಪ್ರಯೋಜನವಾಗಿರಲಿಲ್ಲ. ಅಲ್ಲದೆ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಮಗುವನ್ನ ದಾಖಲಿಸಿದಾಗ ಕಾಯಿಲೆ ಗುಣ ಲಕ್ಷಣ ಗೊತ್ತಾಗಿಲ್ಲ, ಬೇರೆ ಕಡೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಅಲ್ಲದೆ ಆತ್ಮೀಯರೊಬ್ಬರು ಮಂಗಳೂರಿನ ಎಜೆ ಆಸ್ಪತ್ರೆ ಚಿಕಿತ್ಸೆ ಉತ್ತಮವಾಗಿರುತ್ತದೆ ಎಂದು ಹೇಳಿದ್ದಕ್ಕೆ ಎಜೆ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ನೀಡಿಸಿದ್ದಾರೆ. ಅಲ್ಲಿಯವರೆಗೂ ಊಟ ಮಾಡಿಕೊಂಡು ಜಿಂಕೆಯಂತೆ ಓಡಾಡಿಕೊಂಡಿದ್ದ ಕೀರ್ತಿರಾಜ್, ವೈದ್ಯರು ಬೆನ್ನಿನಲ್ಲಿ ನೀರು ಇದೆ ಎಂದು ಶಸ್ತ್ರ ಚಿಕಿತ್ಸೆ ಮಾಡಿದ ಮೇಲೆ ಮಗು ತನ್ನೆರಡು ಕಾಲುಗಳನ್ನ ಕಳೆದುಕೊಂಡಿದ್ದಾನೆ. ಈ ಬಗ್ಗೆ ವೈದ್ಯರನ್ನ ಪ್ರಶ್ನೆ ಮಾಡಿದ್ದಕ್ಕೆ ಮಗುವಿನೊಂದಿಗೆ ದಂಪತಿಯನ್ನ ಸಹ ಮಂಗಳೂರಿನ ಎಜೆ ಆಸ್ಪತ್ರೆ ವೈದ್ಯರು ಅಮಾನುಷವಾಗಿ ಹೊರ ಹಾಕಿದ್ದಾರೆ.
ಈ ವೇಳೆಗಾಗಲೇ ಸುಮಾರು 7 ಲಕ್ಷವನ್ನ ಕಳೆದುಕೊಂಡಿದ್ದ ದಂಪತಿ, ಮಗುವಿನ ಚಿಕಿತ್ಸೆಗಾಗಿ ಮಂಗಳೂರಿನಲ್ಲಿ ಮರಳು ಕೆಲಸ ಮಾಡಿ ಹಣವನ್ನ ವೈದ್ಯರಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ಮಗ ಮೊದಲಿನಂತಾಗಲಿ ಎಂದು ಜಮೀನು ಮಾರಿಕೊಂಡು, ಬೇರೆಯವರ ಬಳಿ ಸಾಲ ಮಾಡಿ ಪೋಷಕರು ಚಿಕಿತ್ಸೆ ನೀಡಿಸುತ್ತಿದ್ದಾರೆ. ಇಷ್ಟಿದ್ದರು ಮಗು ಮಾತ್ರ ತನ್ನ ಎರಡು ಕಾಲುಗಳನ್ನ ಪುನಃ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೆ ಮಗು ದರ್ಶನ್ ಅಭಿಮಾನಿಯಾಗಿದ್ದು, ಅವರಿಂದ ಏನಾದ್ರು ಸಹಾಯ ಸಿಗಬಹುದ ಎಂದು ಪೋಷಕರು ಎದುರು ನೋಡುತ್ತಿದ್ದಾರೆ.
ಒಂದು ಕಡೆ ಆರ್ಥಿಕ ದುರ್ಬಲರು, ಇನ್ನೊಂದು ಕಡೆ ಮಗುವಿನ ಕಾಲು ಬರುತ್ತದೆ ಎಂಬ ಭರವಸೆ, ಈ ನಡುವೆ ನಟ ದರ್ಶನ್ ಅಭಿಮಾನಿಯಾಗಿರುವ ಕೀರ್ತಿರಾಜ್ ಪೊಲೀಸ್ ಅಧಿಕಾರಿಯಾಗಬೇಕು ಎಂಬ ಹಂಬಲ. ಈ ನಡುವೆ ಯಾರಾದ್ರು ಅವರಿಗೆ ಆರ್ಥಿಕ ಸಹಾಯ ಮಾಡಿದ್ರೆ ಮಗುವಿಗೆ ಪುನರ್ಜನ್ಮ ಬಂದಂತಾಗುತ್ತದೆ.
ಆರ್ಥಿಕ ಸಹಾಯ ಮಾಡುವ ಇಚ್ಚಿಸುವವರು
ನೇತ್ರಮ್ಮ W/O ಕುರುವತ್ತೆಪ್ಪ
ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್
ತೆಲಗಿ ಬ್ರಾಂಚ್
ಹರಪನಹಳ್ಳಿ ತಾಲೂಕು
ಅಕೌಂಟ್ ನಂಬರ್-10838101041776
ಐಎಫ್ ಎಸ್ ಸಿ ಕೋಡ್-PKGB0010838
ಈ ಅಕೌಂಟ್ ಗೆ ಹಣ ಸಂದಾಯ ಮಾಡಿ