ದಿನದ ಸುದ್ದಿ
ಹೃದಯ ಸ್ಪರ್ಶಿ ಘಟನೆ | ಮರಣ ಹೊಂದಿದ ಮಡದಿ ತದ್ರೂಪದಲ್ಲಿ ಮರಳಿ ಬಂದು ಗೃಹ ಪವೇಶ ನಡೆಸಿದರು..!
ಇದೊಂದು ಅಪರೂಪದ ಘಟನೆ.ಕೊಪ್ಪಳದ ಭಾಗ್ಯನಗರದ ಕೂದಲು ಉದ್ಯಮಿ ಶ್ರೀನಿವಾಸ ಗುಪ್ತ ಅವರ ಮಡದಿ ಮಾಧವಿ ಅವರು 2017 ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಆಗ ಮಾಧವಿ ಕನಸಿದ್ದ ಮನೆಯನ್ನು ಶ್ರೀನಿವಾಸ ಕಟ್ಟಿಸಿ ಗೃಹಪ್ರವೇಶ ಮಾಡಬೇಕಿತ್ತು.
ಈ ಸಂದರ್ಭದಲ್ಲಿ ಪತ್ನಿಯು ಇಲ್ಲದಿರುವುದು ಗಾಢವಾಗಿ ಕಾಡುತ್ತಿತ್ತು. ಆಗ ಶ್ರೀನಿವಾಸ್ ಅವರು ಬೆಂಗಳೂರಿನ ಗೊಂಬೆಮನೆ ಕಲಾವಿದರ ಬಳಿ ಹೆಂಡತಿಯ ತದ್ರೂಪದ ಗೊಂಬೆಯನ್ನು ಮಾಡಿಸಿದರು. ತನ್ನ ಹೊಸ ಮನೆಯ ಪ್ರವೇಶದ ಸಂದರ್ಭದಲ್ಲಿ ಹೆಂಡತಿಯ ತದ್ರೂಪವನ್ನು ಮನೆಯ ಪ್ರವೇಶಕ್ಕೆ ಎದುರಾಗಿ ಕೂರಿಸಿದರು.
ಥೇಟ್ ಮಾಧವಿಯೇ ಜೀವಂತಗೊಂಡಂತೆ ಎಲ್ಲರಿಗೂ ದಿಗ್ಭ್ರಮೆಯಾಯಿತು. ಚಕಿತಗೊಂಡರು. ನಂತರ ಸಾವರಿಸಿಕೊಂಡಯ ಎಲ್ಲರೂ ಮಾಧವಿ ಜತೆ ಫೋಟೋ ತೆಗೆಸಿಕೊಂಡರು.ಮಕ್ಕಳು ಅಮ್ಮನನ್ನು ಮರಳಿ ಪಡೆದಂತೆ ಖುಷಿ ಪಟ್ಟರು. ಪತಿ ಶ್ರೀನಿವಾಸರು ಪತ್ನಿಯನ್ನು ತದ್ರೂಪದ ರೀತಿಯಲ್ಲಿ ಮರಳಿ ಪಡೆದಂತಹ ಖುಷಿಯಲ್ಲಿ ಮನೆ ಪ್ರವೇಶ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243