ದಿನದ ಸುದ್ದಿ
ಪತ್ರಿಕೆ ವಿತರಕರ ದಿನ: ಶ್ರಮಜೀವಿಗಳ ಕಾಯದ ಬಗ್ಗೆ ಇರಲಿ ಮೆಚ್ಚುಗೆ
ಸುದ್ದಿದಿನ ಡೆಸ್ಕ್, (ಸೆ.4): ಇಂದು ಪತ್ರಿಕೆ ವಿತರಕರ ದಿನ. ವಿಶ್ವದ ವಿದ್ಯಮಾನವನ್ನು ಓದುಗ ದೊರೆಯ ಮನೆ ಬಾಗಿಲಿಗೆ ಮುಟ್ಟಿಸುವ ಪತ್ರಿಕೆ ವಿತರಕರ ಕುರಿತು ಅಭಿಮಾನ, ಮೆಚ್ಚಗೆ ವ್ಯಕ್ತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ.
ಹೌದು, ಮಳೆ, ಗಾಳಿಯನ್ನದೇ ನಸುಗಿನಲ್ಲೇ ಎದ್ದು ಪತ್ರಿಕೆಗಳನ್ನು ಜೋಡಿಸಿಕೊಂಡು ಓದುಗರ ಮನೆ ಬಾಗಿಲಿಗೆ ತಲುಪಿಸುವ ವಿತರಿಕರಗೆ ಹಲವು ಸಂಕಷ್ಟಗಳಿವೆ. ತಮಗೆ ಸಿಗುವ ಅಲ್ಪ ಕಾಸಿನಲ್ಲೇ ತೃಪ್ತಿ ಪಡುವ ವಿತರಕರು ಚಾಚೂತಪ್ಪದೆ ಪ್ರತಿದಿನ ಪತ್ರಿಕೆ ಮುಟ್ಟಿಸುವ ಕಾರ್ಯ ಮಾಡುತ್ತಾರೆ. ಈ ಸಂಘಟಿತ ವಲಯದ ಕಾರ್ಮಿಕರಿಗೆ ಮುಖ್ಯವಾಗಿ ಜೀವನ ಭದ್ರತೆ ಇಲ್ಲ.
ಹಲವು ವರ್ಷಗಳ ಹಿಂದೆ ಪತ್ರಿಕಾ ಏಜೆಂಟರು ಹಾಗೂ ವಿತರಕರು ಸಂಘಟನೆ ರೂಪಿಸಿದ್ದರು. ಆದರೆ ಅದು ಅಷ್ಟಾಗಿ ಕಾರ್ಯನಿರ್ವಹಿಸಲಿಲ್ಲ. ಇನ್ನು ಜಿಲ್ಲಾ ಮಟ್ಟದಲ್ಲಿ ರಚನೆಯಾಗುತ್ತಿರುವ ಸಂಘಟನೆಗಳ ಸಹ ಅಷ್ಟಕ್ಕೆ ಸೀಮಿತವಾಗುತ್ತವೆ.
ಎಂಟರಿಂದ ಅರವತ್ತರ ವಯೋಮಾನದವರು ಪತ್ರಿಕೆ ವಿತರಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಹಲವರು ಪತ್ರಿಕೆಯಿಂದ ಅಲ್ಪಹಣವನ್ನೇ ನೆಚ್ಚಿಕೊಂಡಿದ್ದಾರೆ. ಮತ್ತೆ ಕೆಲವರು ಇದರ ಜೊತೆಗೆ ಅನ್ಯಕೆಲಸ ಕೂಡ ಮಾಡುತ್ತಿದ್ದಾರೆ.
ಸಾವಿರಾರು ಪತ್ರಿಕೆ ವಿತರಕರು
ಜಿಲ್ಲೆಯೊಂದರಲ್ಲಿ ಕನಿಷ್ಠ 1200ರಿಂದ 1300 ಪತ್ರಿಕೆ ಏಜೆಂಟರು ಹಾಗೂ ವಿತರಕರಿದ್ದು, ರಾಜ್ಯದಲ್ಲಿ ಸಾವಿರಾರು ವಿತರಕರು ಕೆಲಸ ಮಾಡುತ್ತಿದ್ದಾರೆ. ವರ್ಷಪೂರ್ತಿ ನಿದ್ದೆಗೆಟ್ಟು ಪತ್ರಿಕೆ ತಲುಪಿಸುವ ಕಾರ್ಯ ಮಾಡುವ ಗುರುತಿಸುವ ಕಾರ್ಯವಾಗುತ್ತಿಲ್ಲ ಎಂಬ ಅ¼ಲು ಪತ್ರಿಕೆ ವಿತರಕರದ್ದು.
ಪತ್ರಿಕೆ ವಿತರಕರಿಗೆ ಬೇಕು ಈ ಸೌಲಭ್ಯ
- ಪತ್ರಿಕೆ ವಿತರಕರಿಗೆ ಸರ್ಕಾರ ಜೀವನ ಭದ್ರತೆ ಒದಗಿಸಲು ಮುಂದಾಗಬೇಕು.
- ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಕ್ಕೆ ಚಿಂತನೆ ನಡೆಸಬೇಕು
- ಸರ್ಕಾರಿ ಬಸ್‍ಗಳಲ್ಲಿ ಉಚಿತ ಬಸ್ ನೀಡುವ ಕುರಿತು ಪರಿಶೀಲನೆ ನಡೆಸಬೇಕು