ದಿನದ ಸುದ್ದಿ
ಸಂಸತ್‌ನ ನೂತನ ಕಟ್ಟಡದಲ್ಲಿ ಮುಂದಿನ ವರ್ಷ ಚಳಿಗಾಲದ ಅಧಿವೇಶನ : ಸ್ಪೀಕರ್ ಓಂ ಬಿರ್ಲಾ
ಸುದ್ದಿದಿನ ಡೆಸ್ಕ್ : ಬರುವ ವರ್ಷದ ಚಳಿಗಾಲದ ಅಧಿವೇಶನವನ್ನು ಸಂಸತ್‌ನ ನೂತನ ಕಟ್ಟಡದಲ್ಲಿ ನಡೆಸಲಾಗುವುದು ಎಂದು ಲೋಕಸಭಾಧ್ಯಕ್ಷ ಓಂ ಬಿರ್ಲಾ ಹೇಳಿದ್ದಾರೆ.
21 ನೇ ಶತಮಾನದಲ್ಲಿ ಭಾರತ, ನೂತನ ಆವಿಷ್ಕಾರದ ಜತೆಗೆ ಹೊಸ ಸಂಸತ್ ಭವನವನ್ನು ಲೋಕಾರ್ಪಣೆ ಮಾಡಿ, ಅಲ್ಲಿ ಕಲಾಪ ನಡೆಸಲಾಗುವುದು. ನೂತನ ಕಟ್ಟಡ ಬಹುತೇಕ ಪೂರ್ಣವಾಗುವ ಹಂತದಲ್ಲಿದ್ದು, ತ್ವರಿತವಾಗಿ ಕಾಮಗಾರಿ ಮುಕ್ತಾಯವಾಗಲಿದೆ ಎಂದರು.
ಸಿಂಗಾಪುರ ಸಂಸತ್‌ನ ಸಭಾಧ್ಯಕ್ಷ ತಾನ್ ಚುವಾನ್-ಜಿನ್ ನಿಯೋಗದೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ-ಸಿಂಗಾಪುರ್ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಪ್ರಮುಖ ದೇಶಗಳಾಗಿವೆ. ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವ ಪದ್ಧತಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243