ದಿನದ ಸುದ್ದಿ

ಸಚಿವೆ ಕಾಲೆಳೆಯಲು ಮೇಡಂ ಡಿಸೈಡ್ ನಹೀ ಮಾಡ್ತಾ ಟ್ವಿಟರ್ ಖಾತೆ

Published

on

ಸುದ್ದಿದಿನ ಡೆಸ್ಕ್: ಕೊಡಗಿನಲ್ಲಾದ ಪ್ರಕರಣದಿಂದ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾಲೆಳೆಯುವ ಸಲುವಾಗಿ “ಮೇಡಂ ಡಿಸೈಡ್ ನಹಿ ಮಾಡ್ತಾ” ಎಂಬ ಖಾತೆ ಟ್ವಿಟರ್‍ನಲ್ಲಿ ಕಾಣಸಿಕೊಂಡಿದೆ. .3ಸಚಿವೆಯ ಕುರಿತ ಟೀಕೆಗಳು, ಜೋಕ್‍ಗಳು ಹಾಗೂ ಆಕ್ರೋಶದ ನುಡಿಗಳು ಈ ಟ್ವಿಟರ್ ಹ್ಯಾಂಡಲ್‍ನಲ್ಲಿ ದಾಖಲಾಗುತ್ತಿದ್ದು, ಕೆಲವರು ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಕಟುವಾಗಿ ಬರೆದು ಸಚಿವೆಯ ಅಧಿಕೃತ ಖಾತೆಗೆ ಟ್ಯಾಗ್ ಮಾಡುತ್ತಿದ್ದಾರೆ.
ಸೋಮವಾರ ಬೆಳಗ್ಗೆ ಸೃಷ್ಟಿಯಾಗಿರುವ ಈ ಖಾತೆ ಸದ್ಯ 112 ಹಿಂಬಾಲಕರನ್ನು ಹೊಂದಿದ್ದು, ಕ್ಷಿಪ್ರ ಗತಿಯಲ್ಲಿ ಹಿಂಬಾಲಕರ ಸಂಖ್ಯೆ ದಾಖಲಾಗುತ್ತಿದೆ.
ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಮಿಶ್ರಿತ ಭಾಷೆಯಲ್ಲಿ ಬಳಕೆದಾರರು ಟ್ವಿಟರ್ ವಾಲ್‍ನಲ್ಲಿ ತಮ್ಮ ಹೇಳಿಕೆ ದಾಖಲಿಸುತ್ತಿದ್ದಾರೆ.
ಮ್ಯಾಡಮ್ ಕುಚ್ ಬಿ ಮಾಡ್ತಾ, ಸಿಎಂ ಡಿಸೈಡ್ ಮಾಡ್ತಾ.. ಯೇ ಮಾಡ್ತಾ ಮಾಡ್ತಾ ಕ್ಯಾರೇ… ಮ್ಯಾಡಂ ಎಲೆಕ್ಷನ್ ನಹಿ ಮಾಡ್ತಾ… ಡೈರೆಕ್ಟ್ ಆಗಿ ಮಿನಿಸ್ಟರ್ ಆಗ್ತಾ… ಎಂಬ ಹಾಸ್ಯಾಸ್ಪದ ಕೆಮೆಂಟ್‍ಗಳು ದಾಖಲಾಗುತ್ತಿವೆ.
ಜನ ನಂಗೆ ವೋಟ್ ಹಾಕಲ್ಲ ಅದಕ್ಕೆ ಬೇರೆಯವರ ಬಳಿ ಭಿಕ್ಷೆ ಬೇಡಿ ಹೇಗೋ ರಾಜ್ಯ ಸಭಾ ಸದಸ್ಯೆಯಾಗಿ ಈಗ ಸಚಿವೆ ಆಗಿದ್ದೇನೆ ಎಂದು ಟ್ವಿಟರ್ ಹ್ಯಾಂಡಲ್ ಬಳಸುವವರೇ ಸಚಿವೆಯನ್ನು ಟೀಕೆ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version