ದಿನದ ಸುದ್ದಿ

ಜನರ ಸಮಸ್ಯೆ ಕೇಳಲು ಸರಕಾರ ಬದುಕಿಲ್ಲ ಸತ್ತಿದೆ : ಯಡಿಯೂರಪ್ಪ

Published

on

ಸುದ್ದಿದಿನ,ಬೆಳಗಾವಿ : ಸುವರ್ಣ ಗಾರ್ಡನ್ ಬಳಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ್ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು.

ಬೇಡಿಕೆಗಳ ಈಡೇರಿಕೆಗೆ ಸದನದಲ್ಲಿ ಧ್ವನಿ ಎತ್ತುವ ಭರವಸೆ ನೀಡಿದ ಬಿ ಎಸ್ ವೈ ಅವರು
ಜನರ ಸಮಸ್ಯೆ ಕೇಳಲು ಸರಕಾರ ಬದುಕಿಲ್ಲ ಸತ್ತಿದೆ. ಸುವರ್ಣ ಸೌಧದ ಸುತ್ತಮುತ್ತಲಿನ ಅನೇಕ ಧರಣಿಗಳು ನಡೆಯುತ್ತಿವೆ. ಸಮಸ್ಯೆ ಆಲಿಸಬೇಕಿದ್ದ ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಜನರ ಸಮಸ್ಯೆಕ್ಕಿಂತ ಪ್ರಮಾಣ ವಚನ ಕಾರ್ಯಕ್ರಮವೆ ಮುಖ್ಯವಾಗಿದೆಎಂದು ಸರ್ಕಾರದ ವಿರುದ್ಧ ಬಿ ಎಸ್ ವೈ ಮತ್ತೊಮ್ಮೆ ಆಕ್ರೋಶವ್ಯಕ್ತ ಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version