ದಿನದ ಸುದ್ದಿ
ಐದು ವರ್ಷದಿಂದ 40 ಆಯುರ್ವೇದ ಆಸ್ಪತ್ರೆಗಳಲಿ ರೋಗಿಗಳೇ ಇಲ್ಲ
ಸುದ್ದಿದಿನ ಡೆಸ್ಕ್: ಕೇಂದ್ರ ಸರಕಾರವು ಆಯುರ್ವೇದ ಔಷಧೀಯ ಪದ್ಧತಿಯನ್ನು ಪುಷ್ಟೀಕರಿಸಲು ಏನೆಲ್ಲಾ ಮಾಡಿದರೂ ರಾಜಸ್ಥಾನದ 40 ಆಯುರ್ವೇದ ಆಸ್ಪತ್ರೆಗಳಲ್ಲಿ ಕಳೆದ ಐದು ವರ್ಷಗಳಿಂದ ಒಬ್ಬ ರೋಗಿಯೂ ಬಂದಿಲ್ಲ.
ಸಿಎಜಿ ವರದಿಯಿಂದ ಈ ಮಾಹಿತಿ ಹೊರಬಿದ್ದಿದೆ. 2012-13ರಿಂದ ಹಿಡಿದು 201-17ರ ವರೆಗೆ ರಾಜಸ್ಥಾನದ ಯಾವುದೇ ಆಯುರ್ವೇದ ಆಸ್ಪತ್ರೆಗಳಲ್ಲಿ ರೋಗಿಗಳು ದಾಖಲಾದ ಪ್ರಕರಣಗಳೇ ಇಲ್ಲ. ಅಥವಾ ಚಿಕಿತ್ಸೆ ನೀಡಿದ ಮಾಹಿತಿಯೂ ಇಲ್ಲ. ಈ ಆಸ್ಪತ್ರೆಗಳ ಬೆಡ್ ಸಂಖ್ಯೆಯನ್ನು ಶೇ. 60ರಷ್ಟು ಹೆಚ್ಚಿಗೆ ಮಾಡಿ ಎಷ್ಟೇ ಅನುದಾನ ನೀಡಿದರೂ ಆಯುರ್ವೇದ ಚಿಕಿತ್ಸೆ ಬಗ್ಗೆ ನಂಬಿಕೆ ಇಟ್ಟು ಯಾವ ರೋಗಿಯೂ ಬರುತ್ತಿಲ್ಲ ಎಂದು ವರದಿ ಹೇಳಿದೆ.
ಇದಕ್ಕೆ ಕಾರಣಗಳೇನು ಎಂಬುದಾಗಿ ಸಿಎಜಿ ರಾಜಸ್ಥಾನ ಸರಕಾವನ್ನು ಕೇಳಿದ್ದು, ಸಿಬ್ಬಂದಿ ಕೊರತೆ, ಮೂಲ ಸೌಲಭ್ಯಗಳಿಲ್ಲದಿರುವುದು, ಹಾಗೂ ಆಯುರ್ವೇದ ಚಿಕಿತ್ಸೆ ಕುರಿತು ಜನರಿಗೆ ಅರಿವಿಲ್ಲದೆ ಇರುವುದು ಮುಖ್ಯ ಕಾರಣಗಳು ಎಂದು ಅಲ್ಲಿನ ಸರಕಾರ ಸಬೂಬು ನೀಡಿದೆ.