/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

‘ಸೋಷಿಯಲ್ ಮೀಡಿಯಾ ಹಬ್’ ಯೋಜನೆಗೆ ನೋ ರೆಸ್ಪಾನ್ಸ್..?

Published

on

ಪ್ರಮುಖಾಂಶಗಳು

• ಸೋಷಿಯಲ್‌ ಮೀಡಿಯಾ ಹಬ್ ಐಡಿಯಾ ಟೆಂಡರ್ ನಾಲ್ಕು ಬಾರಿ ಮುಂದೂಡಿಕೆ

• ಯೋಜನೆಯನ್ನು ಮರುಪರಿಶೀಲಿಸಲು ನಿರ್ಧಾರ

ಸುದ್ದಿದಿನ ಡೆಸ್ಕ್ : ಕೇಂದ್ರ ಸರ್ಕಾರದ ಬಹುನಿರೀಕ್ಷೆ ಮಹತ್ವಾಕಾಂಕ್ಷೆಯ ಯೋಜನೆಯಾದ “ಸೋಷಿಯಲ್‌ ಮೀಡಿಯಾ ಹಬ್” ಯೋಜನೆಯ ಟೆಂಡರ್ ಪಡೆದುಕೊಳ್ಳಲು ನಿರೀಕ್ಷಿತ ಬಿಡ್.ದಾರರು ನಿರಾಸಕ್ತಿ ವ್ಯಕ್ತವಾಗುತ್ತಿದೆ.

ಈ ಪ್ರಾಜೆಕ್ಟ್‌ನ ಹೊಣೆ ಹೊತ್ತಿರುವ ಬ್ರಾಡ್‌ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ ಟೆಂಡರ್ ಕೊನೆಯ ದಿನಾಂಕವನ್ನು ಮುಂದೂಡಿದ್ದು, ಇದು ನಾಲ್ಕನೇ ಬಾರಿ ಟೆಂಡರ್ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಿದೆ. ಯೋಜನೆ ಆರಂಭಕ್ಕೂ ಮೊದಲು ಟೆಂಡರ್ ದಾರರಿಂದ ನಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಿಡಿಯಾ ಹಬ್.ಗೆ ಸಾಫ್ಟ್‌ವೇರ್ ಒದಗಿಸಲು ಬಿಇಸಿಐಎಲ್ (BECIL) ಮೇ 17ರಂದು ಟೆಂಡರ್ ಕರೆದಿತ್ತು. ಆದರೆ, ಯಾವುದೇ ಬಿಡ್.ದಾರರು ಮುಂದೆಬಾರದ ಕಾರಣ ಟೆಂಡರ್ ದಿನಾಂಕ ಮೇ 24ಕ್ಕೆ ವಿಸ್ತರಣೆಗೊಂಡಿತು. ಆಗಲೂ ಯಾರೂ ಬರದಿದ್ದರಿಂದ ಅದು ಮೇ 31ಕ್ಕೆ ಮುಂದಕ್ಕೆ ಹೋಯಿತು. ಆನಂತರ ಜೂನ್ 18ರಿಂದ ಆಗಸ್ಟ್ 20ಕ್ಕೆ ದಿನಾಂಕ ಮುಂದೂಡಲಾಗಿದೆ.

ಟೆಂಡರನ್ನು ನಾಲ್ಕು ಬಾರಿ ಮುಂದೂಡಿದಾಗಲೂ ನಿರೀಕ್ಷಿತ ಟೆಂಡರ್ ದಾರರು ಅರ್ಜಿ ಹಾಕಿರಲಿಲ್ಲ. ಹೀಗಾಗಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಯೋಜನೆಯನ್ನು ಪುನರ್ವಿಮರ್ಶಿಸಲು ನಿರ್ಧರಿಸಿದೆ
ಎಂದು ಇಲಾಖೆ ಮೂಲಗಳು ತಿಳಿಸಿವೆ.

ಯೋಜನೆ ಅಧ್ಯಯನಕ್ಕೆ ಸೂಚನೆ

ಇನ್ಫಾರ್ಮೇಶನ್ ಮತ್ತು ಬ್ರಾಡ್‌ಕಾಸ್ಟಿಂಗ್ ಇಲಾಖೆಯ ಹೊಸ ಕಾರ್ಯದರ್ಶಿ ಅಮಿತ್ ಖರೆ ಅಧಿಕಾರ ವಹಿಸಿಕೊಂಡ ನಂತರ ಯೋಜನೆಯನ್ನು ಕೆಲದಿನಗಳ ವರೆಗೆ (ಹೋಲ್ಡ್) ತಡೆಹಿಡಿದು, ಅದನ್ನು ಅಧ್ಯಯನ ಮಾಡಲು ಕೋರಿದ್ದು, ಹಬ್ ಬಳಸಿಕೊಳ್ಳಲು ಇರುವ ನೀತಿ, ನಿಯಮಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದಾರೆ.

ಸೋಷಿಯಲ್‌ ಮಿಡಿಯಾ ಹಬ್ ಯೋಜನೆಗೆ ವಿವಾದ ಸುತ್ತಿಕೊಂಡಿದ್ದು, ಈ ಬಗ್ಗೆ ಅನೇಕರು, ಪರೋಕ್ಷ ತನಿಖೆ ಹಾಗೂ ಮತದಾರರ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುವ ಉದ್ದೇಶ ಹೊಂದಿದ್ದು, ಸೋಷಿಯಲ್‌ ಮಿಡಿಯಾ (ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಹಾಗೂ ಇಮೇಲ್) ಮೇಲೆ ನಿಗಾ ಇಡುವ ಹಿಡನ್ ಅಜೆಂಡಾ ಇದೆ. ಈ ಉದ್ದೇಶದಿಂದಾಗಿ ಯೋಜನೆಯ ನಿರ್ವಹಣೆ ಸ್ಥಳೀಯ ಮಟ್ಟದಲ್ಲೇ ಬಹು ಭಾಷೆಯಲ್ಲಿ ನಡೆಯಲಿದೆ.

ವ್ಯಕ್ತಿಯ ಪ್ರೈವಸಿ ಧಕ್ಕೆ; ಬಳಕೆದಾರರ ವರ್ಗೀಕರಣ

ಸೋಷಿಯಲ್‌ ಮಿಡಿಯಾದಲ್ಲಿ ನಡೆಯುವ ಸಂಭಾಷಣೆ, ಚರ್ಚೆ, ಮಾತುಕತೆ, ವ್ಯಕ್ತಿಯ ಪ್ರೈವಸಿ ಮೇಲೆ ನಿಗಾ ಇಡಲಿದೆ. ಸೋಷಿಯಲ್‌ ಮಿಡಿಯಾದಲ್ಲಿ ನಡೆಯುವ ಚರ್ಚೆ ಆಧರಿಸಿ ಬಳಕೆದಾರರನ್ನು ವರ್ಗೀಕರಣ ಮಾಡಲಿದೆ. ಸಂಭಾಷಣೆ ಆಧರಿಸಿ ಪಾಸಿಟಿವ್, ನೆಗೆಟಿವ್, ನ್ಯೂಟ್ರಲ್ ಎಂದು ಮೂರು ಗುಂಪುಗಳನ್ನಾಗಿ ವರ್ಗೀಕರಿಸಲಿದೆ ಎಂದು ಹೇಳಲಾಗುತ್ತಿದೆ.

ಕಣ್ಗಾವಲಿಗೆ ಪತ್ರಕರ್ತರ ನೇಮಕ

ಬಳಕೆದಾರರಿಗೆ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ರಾಜಕೀಯ ಸುದ್ದಿಗಳು ತಲುಪುವ “ರಿಯಲ್ ಟೈಮ್” ಅನ್ನು ಟ್ರ್ಯಾಕ್ ಮಾಡುವ ಉದ್ದೇಶ ಹೊಂದಿದೆ ಎಂಬ ಆರೋಪವಿದೆ. ಸೋಷಿಯಲ್‌ ಮಿಡಿಯಾದ ನಿಗಾ ಇಡುವುದ್ದಾಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಪತ್ರಕರ್ತರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಇರಾದೆ ಸರ್ಕಾರಕ್ಕಿದೆ.

ನೆಗೆಟಿವ್ ಒಪಿನಿಯನ್ ಪಾಸಿಟಿವ್ ಮಾಡುವ ಉದ್ದೇಶ

ಸರ್ಕಾರದ ಯೋಜನೆಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿ, ಸರ್ಕಾರದ ಯೋಜನೆಗಳನ್ನು ಪ್ರಮೋಟ್ ಮಾಡಲು ಸಲಹೆ, ಸೂಚನೆ ಪಡೆದುಕೊಳ್ಳುವ ಉದ್ದೇಶ ಹೊಂದಿದೆ.

ಸುದ್ದಿದಿನ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version