ದಿನದ ಸುದ್ದಿ

ದಾವಣಗೆರೆ | ಕೊರೊನಾ ಸೋಂಕಿತೆಗೆ ನಾರ್ಮಲ್ ಡೆಲಿವರಿ

Published

on

ಸುದ್ದಿದಿನ,ದಾವಣಗೆರೆ/ಹರಿಹರ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಸಹಜ ಹೆರಿಗೆ ಮಾಡಿಸಲಾಗಿದೆ.

ಭಾನುವಳ್ಳಿ ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗೆ ಅವರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಕೊಳ್ಳಲಾಗಿತ್ತು. ಪ್ರಸೂತಿ ತಜ್ಞೆ ಡಾ.ಸವಿತಾ ಹಾಗೂ ಶಿಶು ತಜ್ಞೆ ಡಾ.ಪಂಕಜಾ ಅವರ ನೇತೃತ್ವದ ವೈದ್ಯರ ತಂಡ ಹಾಗೂ ಸಿಬ್ಬಂದಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಡಾ.ಸವಿತಾ ಮಾತನಾಡಿ, ಕೋವಿಡ್‍ ಸೋಂಕಿತೆಯ ಸಹಜ ಹೆರಿಗೆ ಸಂತಸ ನೀಡಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version