ಕ್ರೀಡೆ
Olympic Games Paris 2024 | ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ; ಇಲ್ಲಿದೆ ಇಂದಿನ ಆಟಗಳ ಸಂಪೂರ್ಣ ಮಾಹಿತಿ
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನವಾದ ಇಂದು ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್ಸ್ ಪಂದ್ಯದಲ್ಲಿ ಮನು ಭಾಕರ್ ಕಂಚು ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ.
ಈ ಮೂಲಕ ಅವರು, ಒಲಿಂಪಿಕ್ಸ್ನ ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೈನಲ್ ಪಂದ್ಯದಲ್ಲಿ ಹೆಚ್ಚಿನ ಕಾಲ 2ನೇ ಸ್ಥಾನದಲ್ಲಿದ್ದು, ಬೆಳ್ಳಿ ಗೆಲ್ಲುವ ಸನಿಹದಲ್ಲಿದ್ದ ಅವರನ್ನು ಕೊನೆ ಕ್ಷಣದಲ್ಲಿ ಕೊರಿಯಾದ ಕಿಮ್‌ಯೆಜಿ ಹಿಂದಿಕ್ಕಿದರು. ಫೈನಲ್ಸ್ನಲ್ಲಿ ಮನುಬಾಕರ್ 221.7 ಅಂಕಗಳ ಮೂಲಕ ಕಂಚು ಪದಕ ಗೆದ್ದರೆ ದಕ್ಷಿಣ ಕೊರಿಯಾದ ಕಿಮ್‌ಯೆಜಿ 241.3 ಅಂಕಗಳ ಮೂಲಕ ಬೆಳ್ಳಿ ಹಾಗೂ ಅದೇ ರಾಷ್ಟ್ರದ ಒಹ್ ಯೆ ಜಿನ್, ದಾಖಲೆಯ 243.2 ಅಂಕಗಳ ಮೂಲಕ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು. ಮನು ಭಾಕರ್ ಅವರ ಈ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಮಹಿಳೆಯರ ಶೂಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ. ಅವರ ಈ ಸಾಧನೆಯ ಕುರಿತು ಭಾರತಕ್ಕೆ ಹೆಮ್ಮೆಯಿದ್ದು, ಅವರು ಅನೇಕ ಕ್ರೀಡಾಪಟುಗಳು ಹಾಗೂ ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ ಎಂದು ರಾಷ್ಟ್ರಪತಿಯವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮನು ಭಾಕರ್ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದು, ಭಾರತಕ್ಕೆ ಇದು ಐತಿಹಾಸಿಕ ಪದಕವಾಗಿದೆ. ಮಹಿಳಾ ಶೂಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂಡುಕೊಟ್ಟಿರುವುದರಿAದ ಇದೊಂದು ಅಸಾಮಾನ್ಯ ಹಾಗೂ ವಿಶೇಷ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ.
ಇಂದು ನಡೆದ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತದ ಅರ್ಜುನ್ ಬಬೂಟ 630.1 ಅಂಕಗಳೊAದಿಗೆ 7ನೇ ಸ್ಥಾನಗಳಿಸಿ ಫೈನಲ್ ಪ್ರವೇಶಿಸಿದ್ದಾರೆ. ಹಾಗೆಯೇ ಮಹಿಳೆಯರ 10 ಮೀಟರ್ ಏರ್ ರೈಫಲ್‌ನಲ್ಲಿ ರಮಿತಾ ಜಿಂದಾಲ್ ಫೈನಲ್ ಪ್ರವೇಶಿಸಿದ್ದಾರೆ. ರಮಿತಾ ಜಿಂದಾಲ್, 631.5 ಅಂಕಗಳೊAದಿಗೆ 5ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು. ಮತ್ತೊರ್ವ ಮಹಿಳಾ ಶೂಟರ್ ಎಲವೆನಿಲ್ ವಲರಿವನ್ 630.7 ಅಂಕಗಳೊAದಿಗೆ 10ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಲು ವಿಫಲರಾದರು.
ಇಂದು ನಡೆದ ಮಹಿಳೆಯರ ಬ್ಯಾಡ್ಮಿಂಟನ್‌ನ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಪಂದ್ಯದಲ್ಲಿ 2 ಒಲಿಂಪಿಕ್ ಪದಕ ವಿಜೇತೆ ಭಾರತದ ಪಿ.ವಿ. ಸಿಂಧೂ, ಮಾಲ್ಡೀವ್ಸ್ನ ಫಾತಿಮತ್ ನಬಾಹ ಅಬ್ದುಲ್ ರಜಾಕ್ ಅವರನ್ನು 21-9, 21-6 ಅಂಕಗಳ ಅಂತರದಲ್ಲಿ ಮಣಿಸಿ ಶುಭಾರಂಭ ಕಂಡಿದ್ದಾರೆ. ಟೆಬಲ್ ಟೆನಿಸ್‌ನ 64ರ ಸುತ್ತಿನಲ್ಲಿ ಭಾರತದ ಶ್ರೀಜಾ ಅಕುಲಾ, ಸ್ವೀಡನ್‌ನ ಕ್ರಿಸ್ಟಿನಾ ಕಾಲ್ಬರ್ಗ್ ವಿರುದ್ಧ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದರು.
ಮಹಿಳಾ ಬಿಲ್ಲುಗಾರಿಕೆಯಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕತ್ ಹಾಗೂ ಭಜನ್ ಕೌರ್ ಈ ಮೂವರನ್ನೊಳಗೊಂಡ ಭಾರತೀಯ ತಂಡ ಕ್ವಾಟರ್ ಫೈನಲ್‌ನಲ್ಲಿ ನೆದರ್‌ಲ್ಯಾಂಡ್ ತಂಡದ ವಿರುದ್ಧ 0-6 ಅಂಕಗಳಿಂದ ಪರಾಭವಗೊಂಡಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಎಚ್.ಎಸ್. ಪ್ರಣೋಯ್, ಜರ್ಮನಿಯ ಫೇಬಿಯನ್ ರೋತ್ ವಿರುದ್ಧ ಹೋರಾಟ ನಡೆಸಲಿದ್ದಾರೆ.
ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಭಾರತದ ಅನುಭವಿ ಆಟಗಾರರಾದ ರೋಹನ್ ಬೋಪಣ್ಣ ಹಾಗೂ ಶ್ರೀರಾಂ ಬಾಲಾಜಿ ಜೋಡಿ ಫ್ರಾನ್ಸ್ನ ಗೇಲ್ ಮೋನ್ಫಿಲ್ಸ್ ಮತ್ತು ಎಡ್ವರ್ಡ್ ರೋಜರ್ ವ್ಯಾಸೆಲಿನ್ ಜೋಡಿ ವಿರುದ್ಧ ಸೆಣಸಲಿದೆ. ಪ್ಯಾರಿಸ್ ಒಲಿಂಪಿಕ್ಸ್ನ ಟೇಬಲ್ ಟಿನ್ನಿಸ್ ಪಂದ್ಯದ ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಶ್ರೀಜಾ ಅಕುಲಾ ಹಾಗೂ ಮಹಿಳಾ ಬಾಕ್ಸಿಂಗ್‌ನ 50 ಕೆಜಿ ವಿಭಾಗದಲ್ಲಿ ನಿಕತ್ ಝರೀನ್ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
https://x.com/siddaramaiah/status/1817536595970650154?t=otcDD00kQUBeN84H7DvrEA&s=19
ಸುದ್ದಿದಿನ.ಕಾಂ|ವಾಟ್ಸಾಪ್|9980346243