ದಿನದ ಸುದ್ದಿ
ಭಾರತದ ಏಕತಾ ಮೂರ್ತಿ; ಒಂದು ಲಕ್ಷ ಮಂದಿ ವೀಕ್ಷಣೆ, 2.1 ಕೋಟಿ ರೂ. ಸಂಗ್ರಹ
ಸುದ್ದಿದಿನ ದೆಹಲಿ: ಒಡೆದು ಹೋಗುತ್ತಿದ್ದ ಅಖಂಡ ಭಾರತವನ್ನು ಏಕೀಕರಣಗೊಳಿಸಿದ ಮಹಾನ್ ಚೇತನ ಸರ್ದಾರ್ ವಲ್ಲಭಭಾಯ್ ಪಟೇಲ್ ಕಾರ್ಯ ಸ್ಮರಣಾರ್ಥ ನಿರ್ಮಿಸಿದ ಅವರ ಏಕತಾ ಮೂರ್ತಿ ವಾರದಲ್ಲಿ ಎಷ್ಟು ಜನರು ನೋಡಿದ್ದಾರೆಂದರೆ ನೀವು ಅಚ್ಚರಿ ಪಡುತ್ತೀರಿ. ಏಕತಾ ಮೂರ್ತಿಯಿಂದ ಭಾರತದ ಹಿರಿಮೆ ವಿಶ್ವದಲ್ಲಿ ಮತ್ತಷ್ಟು ಹೆಚ್ಚಾಗುತ್ತಿದ್ದು, ಏಕತಾ ಮೂರ್ತಿ ನೋಡಲು ದೇಶ, ವಿದೇಶದಿಂದ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿದ್ದಾರೆ.
ಗುಜರಾತಿನ ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಅಣೆಕಟ್ಟಿನ ಬಳಿ ನಿರ್ಮಿಸಿರುವ ಜಗತ್ತಿನ ಅತಿ ಎತ್ತರ 182 ಮೀಟರ್ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲರ ಏಕತಾ ಮೂರ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದರು. ಅಕ್ಟೋಬರ್ 31ರಂದು ಲೋಕಾರ್ಪಣೆ ಗೊಂಡಿದ್ದ ಏಕತಾ ಮೂರ್ತಿ ಸಾರ್ವಜನಿಕವ ವೀಕ್ಷಣೆಗೆ ನವೆಂಬರ್ ಒಂದರಂದು ತೆರೆಯಲಾಯಿತು. ಶನಿವಾರದಂದು ಅಂದಾಜು 27,000ಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಕಳೆದ ಹತ್ತು ದಿನದಲ್ಲಿ ಅಂದಾಜು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದು, 2.1 ಕೋಟಿ ರೂ. ಸಂಗ್ರಹಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ನಿರ್ಮಿಸಿರುವ ಏಕತಾ ಮೂರ್ತಿ ಹಲವು ವಿಶೇಷಗಳಿಂದ ಕೂಡಿದೆ.
- 182 ಮೀಟರ್ ಎತ್ತರ
- ಸ್ಟ್ಯಾಚ್ಯು ಒಳಗೆ ಹೈಸ್ಪೀಡ್ ಲಿಫ್ಟ್
- ಸರ್ದಾರ್ ವಲ್ಲಭಭಾಯ್ ಪಟೇಲ್ ಜೀವನ ಚರಿತ್ರೆ ಮ್ಯೂಸಿಯಂ
- ಗ್ಯಾಲರಿ ಒಳಗೆ ಒಂದೇ ದಿನಕ್ಕೆ 5,000 ಪ್ರವೇಶ ಅವಕಾಶ
- ಸ್ಟ್ಯಾಚ್ಯು ಒಳಗೆ 135 ಮೀಟರ್ ಎತ್ತರದಲ್ಲಿ ವ್ಯೂವರ್ಸ್ ಗ್ಯಾಲರಿ
- ವ್ಯೂವರ್ಸ್ ಗ್ಯಾಲರಿಗೆ ಪ್ರತಿ ಸಲ 200 ಜನರಿಗೆ ಪ್ರವೇಶ
- ಪ್ರತಿ ಸೋಮವಾರ ರಜೆ ಇರುತ್ತದೆ
- ವಯಸ್ಕರರಿಗೆ 350, ಮಕ್ಕಳಿಗೆ (3-15 ವರ್ಷದೊಳಗಿನ) 200 ಶುಲ್ಕ