ದಿನದ ಸುದ್ದಿ
ಏಳನೇ ತರಗತಿವರೆಗೆ ಆನ್ ಲೈನ್ ಕ್ಲಾಸ್ ರದ್ದು: ಸಚಿವ ಮಾಧುಸ್ವಾಮಿ
ಸುದ್ದಿದಿನ, ಬೆಂಗಳೂರು: ಸಂಪುಟ ಸಭೆಯಲ್ಲಿ ಇಂದು ಆನ್ ಲೈನ್ ಕ್ಲಾಸ್ ಬಗ್ಗೆ ಚರ್ಚಿಸಲಾಗಿದ್ದು, 5ನೇ ತರಗತಿ ಬದಲಿಗೆ 7ನೇ ತರಗತಿವರೆಗೆ ಆನ್ ಲೈನ್ ಕ್ಲಾಸ್ ರದ್ದು ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಎಸ್ಎಸ್ಎಲ್ ಸಿ ಪರೀಕ್ಷೆ ನಿಗದಿಯಂತೆ ನಡೆಯಲಿದೆ ಎಂದಿದ್ದಾರೆ. ಬೆಂಗಳೂರು ಕೇಂದ್ರ ವಿವಿಗೆ ಬೆಂಗಳೂರು ಸಿಟಿ ವಿವಿ ಎಂದು ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಸಹಕಾರಿ ಸಕ್ಕರೆ ಕಾರ್ಖಾನೆ ಹೊರತುಪಡಿಸಿ, ಉಳಿದೆಲ್ಲಾ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243