ದಿನದ ಸುದ್ದಿ

ಕಿರು ಪರೀಕ್ಷೆಯಲ್ಲಿ ತೆರೆದ ಪುಸ್ತಕದ ಪರೀಕ್ಷೆ: ಮಹೇಶ್

Published

on

ಸುದ್ದಿದಿನ ಡೆಸ್ಕ್: ವಾರ್ಷಿಕ ಪರೀಕ್ಷೆ ಹೊರತುಪಡಿಸಿ ಕಿರು ಪರೀಕ್ಷೆಗಳು, ಕ್ಲಾಸ್ ಟೆಸ್ಟ್‍ಗಳಲ್ಲಿ ತೆರೆದ ಪುಸ್ತಕ ಪದ್ಧತಿ ಅನುಸರಿಸಲು ಶಿಕ್ಷಣ ಇಲಾಖೆ ಅನುಮತಿ ಕಾಯಬೇಕಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ತಿಳಿಸಿದ್ದಾರೆ.

ಯಳಂದೂರು ತಾಲೂಕಿನ ಮೇಟಳ್ಳಿಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತೆರೆದ ಪುಸ್ತಕ ಪರೀಕ್ಷೆ ನಡೆಸುವುದರಿಂದ ಮಕ್ಕಳಲ್ಲಿ ಸ್ವಂತಿಕೆ ಹುಟ್ಟುತ್ತದೆ. ಪಠ್ಯ ಪುಸ್ತಕಗಳನ್ನು ಓದುತ್ತಾರೆ. ಪರೀಕ್ಷೆ ಎಂದರೆ ಬರೆ ನೆನಪಿನಲ್ಲಿಟ್ಟುಕೊಂಡು ಬರೆಯುವುದಲ್ಲ ಎಂಬುದು ಮಕ್ಕಳಿಗೆ ಅರ್ಥವಾಗುತ್ತದೆ. ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತದೆ ಎಂದು ಮಹೇಶ್ ತಿಳಿಸಿದರು.
ತೆರೆದ ಪುಸ್ತಕ ಪರೀಕ್ಷೆಗಳು ಹೊರ ದೇಶಗಳಲ್ಲೂ ಇದೆ. ಹಾಗಂತ ಅಲ್ಲಿನ ಮಕ್ಕಳ ದಡ್ಡರಾಗಿಲ್ಲ. ಸಮಾಜ ಅದನ್ನು ಸ್ವೀಕರಿಸಬೇಕಷ್ಟೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

Trending

Exit mobile version