ದಿನದ ಸುದ್ದಿ
ಆಪರೇಷನ್ ಕಾವೇರಿ : ಸುಡಾನ್‌ನಲ್ಲಿ ಸುಲುಕಿದ್ದ ಪ್ರಯಾಣಿಕರು ಭಾರತಕ್ಕೆ
ಸುದ್ದಿದಿನ ಡೆಸ್ಕ್ : ಸುಡಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 392 ಪ್ರಯಾಣಿಕರನ್ನು ಭಾರತೀಯ ವಾಯುಪಡೆಯ ಸಿ-17 ವಿಮಾನದ ಮೂಲಕ ನಿನ್ನೆ ನವದೆಹಲಿಗೆ ಕರೆ ತರಲಾಯಿತು.
ಅಲ್ಲದೇ, 362ಭಾರತೀಯರಿದ್ದ ಮತ್ತೊಂದು ವಿಮಾನ ಬೆಂಗಳೂರಿಗೆ ಆಗಮಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಟ್ವೀಟ್‌ನಲ್ಲಿ ಮಾಹಿತಿ ನೀಡಿದ್ದಾರೆ. ಈ ಮಧ್ಯೆ, 270ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಭಾರತೀಯ ವಾಯುಪಡೆಯ ಎರಡು ವಿಮಾನಗಳು ನಿನ್ನೆ ರಾತ್ರಿ ಜೆಡ್ಡಾ ತಲುಪಿವೆ.
ಆಪರೇಷನ್ ಕಾವೇರಿ ಮೂಲಕ ಸುಡಾನ್‌ನಲ್ಲಿ ಸುಲುಕಿದ್ದ ಸುಮಾರು 2 ಸಾವಿರದ 400 ಭಾರತೀಯರನ್ನು 13ತಂಡಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಿ ಭಾರತಕ್ಕೆ ಕರೆ ತರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿದಂಮ್ ಬಗ್ಚಿ ಹೇಳಿದ್ದಾರೆ.
How's the josh? #OperationKaveri
135 more Indian evacuees reached Jeddah by IAF C-130J.
With this 12th batch, around 2100 Indians arrived in Jeddah in total.
Our efforts will continue. pic.twitter.com/zviHg0HJyz
— V. Muraleedharan (@MOS_MEA) April 28, 2023
ಸುದ್ದಿದಿನ.ಕಾಂ|ವಾಟ್ಸಾಪ್|9980346243