/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಭಾಮಿನಿ

ಸೂಲಗಿತ್ತಿ ನರಸಮ್ಮ ಎಂಬ ದೈವ..!

Published

on

ಬಳ್ಳಿಯಿಂದ ಹೂವು ಸಮಯಯಕ್ಕೆ ಸರಿಯಾಗಿ ತಾನೇ ಭೂಮಿಯ ಮೇಲೆ ಬೀಳಬೇಕು. ಅಂತೆಯೇ ಗರ್ಭದಲ್ಲಿರುವ ಮಗುವು ತಾನೇ ತನಾಗಿ ಗರ್ಭದಿಂದ ಹೊರ ಬರಬೇಕು. ಆ ಮೂಲಕ ಅಲ್ಲಿಂದಲೇ ತನ್ನ ಚಲನೆಯನ್ನು ಪ್ರಾರಂಭಿಸಬೇಕು. ಹೀಗೆ ಗರ್ಭದಿಂದ ಹೊರ ಬರುವ ಮಗುವಿಗೆ ಸೂಲಗಿತ್ತಿಯರು ದೈವವಾಗಿ ದಾರಿ ತೋರಿಸುತ್ತಾರೆ. ಆ ಮೂಲಕ ಮನುಕುಲಕ್ಕೆ ಕತ್ತರಿ ಪ್ರಯೋಗವಿಲ್ಲದೇ, ತಾನಾಗಿಯೇ ಜೀವವೊಂದು ಈ ಪ್ರಪಂಚಕ್ಕೆ ಬರುತ್ತದೆ. ಈ ಪ್ರಯಾಣವೇ ತಾಯ್ತನದ ದೊಡ್ಡ ಅದ್ಭುತ! ಹೀಗೆ 15,000 ಜೀವಗಳನ್ನು ತಾಯಿ ಗರ್ಭದಿಂದ ಈ ಪ್ರಪಂಚಕ್ಕೆ ಸಹಜವಾಗಿ ಬೊಗಸೆಯಲ್ಲಿಡಿದು ಭೂಮಿಗೆ ಕರೆತಂದ ದೇವತೆ ನರಸಮ್ಮನವರು.

ಎಳೆಕೂಸು ದೇವರು, ಆ ದೇವರನ್ನು ಜಾಗ್ರತೆಯಾಗಿ ಸಹಜವಾಗಿ ತಾಯಿ ಮಡಿಲಿಗಿಟ್ಟ ನರಸಮ್ಮನವರ ಸಾಧನೆ ಮನುಕುಲಕ್ಕೆ ಮಹತ್ತರ ಕೊಡುಗೆ. ಸರ್ಕಾರಿ ಕೆಲಸ ಸಿಕ್ಕರೂ , ತನ್ನ ಹಳ್ಳಿಯವರನ್ನು ಬಿಟ್ಟು ಬರಲೊಪ್ಪದೇ, ತಮ್ಮ ವಂಶಪಾರಂಪರ್ಯವಾಗಿ ಬಂದ ಸೂಲಗಿತ್ತಿಯ ಬದುಕನ್ನೇ ಮುಂದುವರೆಸಿಕೊಂಡು ಬಂದವರು. ಆ ಮೂಲಕ ಅದೆಷ್ಟೋ ತಾಯಿ, ಮಗು, ಕುಟುಂಬ, ಸಮಾಜದ ಬದುಕನ್ನು ಹಸನು ಮಾಡಿದವರು. ಒಂದು ಹೆರಿಗೆಗೆ ಹೈರಾಣುಗುವ ಹೆಣ್ಣು ಮಕ್ಕಳಿಗೆ ಸಹಜ ಹೆರಿಗೆಯ ಮೂಲಕ, ಆ ನಂತರದ ಬದುಕನ್ನು ಸುಲಭವಾಗಿ ಸಾಗಿಸಲು ಮಾನಸಿಕ, ದೈಹಿಕ ಸಬಲೀಕರಣಕ್ಕೆ ತಮ್ಮ ಕಾಯಕದ ಮೂಲಕ ಶ್ರಮಿಸಿದವರು. ತಮಗಾಗಿ ಯಾವುದೇ ಆಸೆಗಳನ್ನಿಟ್ಟುಕೊಳ್ಳದೇ, ಬಸುರಿ, ಬಾಣಂತಿ, ಕೂಸು ಇದಿಷ್ಟರೊಳಗೆ ಬದುಕು ಸವೆಸಿದವರು . ಆ ಮೂಲಕ ಯುವ ಸಮುದಾಯಕ್ಕೆ, ಆರೋಗ್ಯವಂತ ಕುಟುಂಬದ ನಿರ್ಮಾಣಕ್ಕೆ ತಮ್ಮ ಬದುಕನ್ನು ನಿದರ್ಶನವಾಗಿಟ್ಟವರು.

ಮನುಷ್ಯನ ಹುಟ್ಟಿನಿಂದಲೇ ಮುಂದಿನ ಆತನ ಬದುಕು,ಸಂಬಂಧಗಳು, ವ್ಯವಸ್ಥೆಗಳ ಜೊತೆಗೆ ಬೆಸೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಆತನ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯವಾಗುತ್ತದೆ. ಇಷ್ಟೆಲ್ಲವೂ ಆತನ ಹುಟ್ಟು ಗುಣದಿಂದಲೇ ಬಂದಿರುತ್ತದೆ. ಮಗುವಿಗೆ ಸಹಜವಾಗಿ ಈ ಭೂಮಿಗೆ ಬರಲು ಬೇಕಾಗುವ ಎಲ್ಲಾ ಮಾರ್ಗದರ್ಶನ, ಬಿಗಿ, ಎಲ್ಲವನ್ನು ಸೂಲಗಿತ್ತಿಯರು ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಮಗು ಹುಟ್ಟುತ್ತಲೇ ಶಕ್ತಿಶಾಲಿಯಾಗಿ ಈ ಪ್ರಪಂಚದ ಹೋರಾಟಕ್ಕೆ ಸಜ್ಜಾಗುತ್ತದೆ. ಆ ಮೂಲಕ ತಾನು ಈ ಭೂಮಿಯಲ್ಲಿ ಇರುವಷ್ಟು ದಿವಸ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಇದಕ್ಕೆ ಜೆನೆಟಿಕ್ಸ್, ಸಂಸ್ಕಾರದ ಜೊತೆಗೆ ಸಹಜ ಹೆರಿಗೆಯೂ ಪ್ರಮುಖ ಪಾತ್ರವಹಿಸುತ್ತದೆ. ಅದರಲ್ಲೂ ಮುಖ್ಯವಾಗಿ ಹೆಣ್ಣಿನ ಬದುಕು ಹೆರಿಗೆಯಲ್ಲಿ ಬದಲಾಗುವಾಗ ಆಕೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮಾಡುವವರು ಸೂಲಗಿತ್ತಿಯರು.

ಸಹಜ ಹೆರಿಗೆ, ಸಿಜೇರಿಯನ್ ಹೆರಿಗೆಗೆ ತಮ್ಮನ್ನು ಒಡ್ಡಿಕೊಂಡ ಮಹಿಳೆಯರ ಬದುಕು ನಮ್ಮ ಮುಂದೆ ನಿದರ್ಶನವಾಗಿ ನಿಲ್ಲುತ್ತದೆ. ಈ ನಿಟ್ಟಿನಲ್ಲಿ ಇಂದು ಸಿಜೇರಿಯನ್ ಜಾಲವೇ ಹೆಣೆದುಕೊಂಡಿದೆ. ಇಂಥ ಸಂದರ್ಭದಲ್ಲಿ ನರಸಮ್ಮನವರ ಕನಸಿನಂತೆ ಸಹಜ ಹೆರಿಗೆ ಆಸ್ಪತ್ರೆಯ ಕನಸ್ಸನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಮುನ್ನಡೆಸಬಹುದು.
ಸೂಲಗಿತ್ತಿಯರು ನಮ್ಮ ಆರೋಗ್ಯವಂತ ಮನುಕುಲವನ್ನು ಮುಂದುವರೆಸಲು ಅತ್ಯಗತ್ಯವಾಗಿ ಬೇಕೇ ಬೇಕು. ಅನ್ನೋದನ್ನ ಬದುಕಿ, ಸಾಧಿಸಿ ಹೊರಟ ಪದ್ಮಶ್ರೀ ಪುರಸ್ಕೃತ ನರಸಮ್ಮನವರ ಬದುಕು ಎಲ್ಲ ಯುವ ಸಮುದಾಯಕ್ಕೂ ಮಾದರಿಯಾಗಬೇಕು. ಮಹಾಮಾತೆ ನರಸಮ್ಮನವರಿಗೆ ನಮ್ಮ ನಮನಗಳು !

– ಚೈತ್ರ ಮೈಸೂರು

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version