ಲೈಫ್ ಸ್ಟೈಲ್
ತರಕಾರಿ ಸಿಪ್ಪೆಯಿಂದ ಪೇಪರ್ ತಯಾರಿಸಿದ ಹತ್ತರ ಬಾಲೆ ಮಾನ್ಯ ಹರ್ಷ..!
ಕಸದಿಂದ ರಸ ಅನ್ನೋ ಮಾತು ಕೇಳಿದ್ದೀವಿ. ಇಲ್ಲೊಬ್ಬ ಬಾಲೆ ಅದನ್ನು ಸಾಕಾರ ಗೊಳಿಸುವ ಕಾಲಕ್ಕೆ ಕೈ ಹಾಕಿದ್ದಾಳೆ. ಮನೆಯಲ್ಲಿ ದಿನ ನಿತ್ಯವೂ ಬೀಳುವ ಅಡುಮನೆಯ ಕಸದಿಂದ ಪೇಪರ್ ತಯಾರಿಸಿದ್ದಾಳೆ ಹತ್ತು ವರ್ಷದ ಈ ಪುಟ್ಟ ಬಾಲಕಿ ಮಾನ್ಯ ಹರ್ಷ.
ಮಾನ್ಯ, ಬೆಂಗಳೂರಿನ ಬಿ.ಟಿ.ಎಂ ಬಡಾವಣೆಯ ವಿಬ್ಗಯಾರ್ ಹೈ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿನಲ್ಲೇ ಪ್ರಕೃತಿಯ ಬಗೆಗಿನ ಜವಾಬ್ದಾರಿಯ ಮಾತುಗಳನ್ನಾಡುತ್ತಾ ಪ್ರಕೃತಿ ಪ್ರಧಾನವಾದ ಕಥಾ ಪುಸ್ತಕಗಳನ್ನು ರಚಿಸಿರುವ ಈ ಬಾಲೆ, ಸದ್ಯ ಮತ್ತೊಂದು ಆವಿಷ್ಕಾರಕ್ಕೆ ಕೈ ಹಾಕಿದ್ದಾಳೆ.
ಅಡುಗೆ ಮನೆಯ ತರಕಾರಿ ಸಿಪ್ಪೆಯನ್ನು ಬಳಸಿ ತರಾವರಿ ಪೇಪರ್ ತಯಾರಿಸಿದ್ದಾಳೆ ಮಾನ್ಯ. ಈರುಳ್ಳಿ, ಬೆಳ್ಳುಳ್ಳಿ, ಮುಸುಕಿನ ಜೋಳ, ಬಟಾಣಿ, ಕ್ಯಾರೆಟ್, ಹೀಗೆ ತರಾವರಿ ತರಕಾರಿ ಸಿಪ್ಪೆಯನ್ನು ಬಳಸಿ ದಿನಕ್ಕೊಂದು ಪೇಪರ್ ತಯಾರಿಸಿದ್ದಾಳೆ.
ಅಡುಗೆ ಮನೆಯ ಪದಾರ್ಥಗಳನ್ನು ಬಳಸಿ ಮಾಡಲಾಗಿರುವ ಈ ಪೇಪರ್, ಸಾಮಾನ್ಯ ಪೇಪರ್ ಅಂತೆಯೇ ಬಳಸಬಹುದು.
” ಪ್ರಾರಂಭದಲ್ಲಿ ನಾನು ತಯಾರಿಸಿದ ಪೇಪರ್ ಪುಡಿ ಪುಡಿ ಆಗುತ್ತಿತ್ತು. ಆರಂಭದಲ್ಲಿ ಸ್ವಲ್ಪ ಕಷ್ಟ ಪಡಬೇಕಾಯಿತು. ನಂತರ ನಾನು ಅಡುಗೆ ಮನೆಯ ಒಂದು ಸೇಕ್ರೆಟ್ ಪದಾರ್ಥ ಬಳಸಿದ ನಂತರ, ಅತ್ಯುತ್ತಮ ವಾದ ಪೇಪರ್, ಕಾರ್ಡ್ಬೋರ್ಡ್ ತಯಾರಿಸಿದೆ” ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾಳೆ ಈ ಪುಟ್ಟ ಪೋರಿ.
ಇದನ್ನು ಪ್ರತಿಯೊಬ್ಬರೂ ಮನೆಯಲ್ಲೇ ತಯಾರಿಸಿದರೆ, ಕಾಡು ಕಡಿಯುವಿಕೆ ಕಡಿಮೆ ಆಗುತ್ತದೆ ಎಂದು ಹೇಳುತ್ತಾಳೆ ಮಾನ್ಯ.
ಮಾನ್ಯ ಚಿಕ್ಕ ವಯಸ್ಸಿನಲ್ಲೇ ನೀರು ಸಂರಕ್ಷಣೆಗಾಗಿ ಮಕ್ಕಳ ವಾಕಥಾನ್ ಆಯೋಜಿಸಿದ್ದಳು. ನಂತರ ಹಲವಾರು ಪ್ರಕೃತಿ ಪ್ರಧಾನವಾದ ಕಾರ್ಯಕ್ರಮ ಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾಳೆ.
ಇವಳ ಪ್ರಕೃತಿ ಪ್ರೇಮವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ UN WATER ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಈಕೆಯ ” ನೇಚರ್ ಅವರ್ ಫ್ಯೂಚರ್ “, “ದಿ ವಾಟರ್ ಹೀರೋ ಸ್ ” ಮತ್ತು ನೀರಿನ ಪುಟಾಣಿ ಸಂರಕ್ಷಕರು ಪುಸ್ತಕಗಳು ಪ್ರಕೃತಿ ಪ್ರಧಾನವಾದ ಕಥೆಗಳನ್ನು ಹೊಂದಿದ್ದು ಅಪಾರವಾಗಿ ಜನಮನ್ನಣೆ ಪಡೆದಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243