ದಿನದ ಸುದ್ದಿ

ಆರ್.ಎಸ್. ಸಿದ್ದಯ್ಯ ಅವರಿಗೆ ಪಿಹೆಚ್‌ಡಿ ಪದವಿ

Published

on

ಸುದ್ದಿದಿನ, ಬೆಂಗಳೂರು : ಕನ್ನಡ ಅಧ್ಯಯನ ಕೇಂದ್ರ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ನಿರ್ದೇಶಕರಾದ ಪ್ರೊ. ಮುನಿಯಪ್ಪ ಅವರ ಮಾರ್ಗದರ್ಶನದಲ್ಲಿ ಸಿದ್ದಯ್ಯ ಆರ್.ಎಸ್.ಅವರು ಮಂಡಿಸಿದ “ಕುವೆಂಪು ಕಾವ್ಯದ ವಿಭಿನ್ನ ನೆಲೆಗಳು” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿಯನ್ನು ನೀಡಿ ಗೌರವಿಸಿದೆ.

ಕೊರಟಗೆರೆ ತಾಲ್ಲೂಕು, ಹೊಳವನಹಳ್ಳಿ ಹೋಬಳಿ, ರೆಡ್ಡಿಹಳ್ಳಿ ಗ್ರಾಮದ ಶ್ರೀರಾಮಯ್ಯ ಮತ್ತು ಭೀಮಕ್ಕ ದಂಪತಿಯ ಮಗನಾದ ಇವರು, ಪ್ರಸ್ತುತ ಸತ್ಯ ಅನ್ವೇಷಣೆ ಪಾಕ್ಷಿಕ ಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ತುಮಕೂರು ಜಿಲ್ಲೆಯ ಕರುನಾಡ ಕನ್ನಡ ಸಿರಿ ಬಳಗ (ರಿ.)ದ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version