ದಿನದ ಸುದ್ದಿ
ಮಗುವಿನ ಮೇಲೆ ದಾಳಿ ನಡೆಸಿದ ಹಂದಿ; ಮಾಲೀಕರಿಗೆ ಪೊಲೀಸರ ಎಚ್ಚರಿಕೆ
ಸುದ್ದಿದಿನ ಕೊಪ್ಪಳ: ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹಂದಿ ಹಿಂಡುವೊಂದು ದಾಳಿ ನಡೆಸಿವೆ. ಕೊಪ್ಪಳದ ಗಂಗಾವತಿಯ ಬನ್ನಿಗಿಡ ಕ್ಯಾಂಪ್ ನಲ್ಲಿ ಘಟನೆ ನಡೆದಿದ್ದು, ಎರಡು ವರ್ಷದ ಮಗು ರಿಹಾನ್ ಹಂದಿ ದಾಳಿಗೊಳಗಿದೆ. ಇದರಿಂದ ಮಗು ತೀವ್ರ ಗಾಯಗೊಂಡಿದೆ.
ಹಂದಿ ದಾಳಿಗೆ ಕಂದಮ್ಮ ತುತ್ತಾಗಿದ್ದರಿಂದ ಬೇರೆಡೆಗೆ ಹಂದಿ ಸ್ಥಳಂತರಿಸುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ. ಘಟನೆ ನಡೆದ ಬಳಿಕ ಎಚ್ಚೆತ್ತುಕೊಂಡ ಪೊಲೀಸರು ಹಂದಿ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.