ದಿನದ ಸುದ್ದಿ
ಕಾವೇರಿ ತಟದಲ್ಲಿ ‘ಪಿತೃಪಕ್ಷ’ ಸಂಭ್ರಯ
ಸುದ್ದಿದಿನ ಡೆಸ್ಕ್ : ಮಹಾಲಯ ಅಮವಾಸ್ಯೆ ಹಿನ್ನಲೆ ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಪಿತೃಪಕ್ಷದ ಸಂಭ್ರಮವೇರ್ಪಟ್ಟಿದೆ. ಅಗಲಿದ ಕುಟುಂಬದ ಪೂರ್ವಜರು ಮತ್ತು ಪಿತೃಗಳಿಗೆ ತಿಲತರ್ಪಣ ಬಿಟ್ಟು ಸದ್ಗತಿಗೆ ಪ್ರಾರ್ಥಿಸಿತು ಆಸ್ತಿಕ ವರ್ಗ.
ಶ್ರೀರಂಗಪಟ್ಟಣದ ಪಶ್ವಿಮವಾಹಿನಿ, ಕಾವೇರಿ ಸ್ನಾನಘಟ್ಟ, ಮತ್ತು ಸಂಗಮದಲ್ಲಿ ನೆರವೇರುತ್ತಿದೆ ಪಿತೃಪಕ್ಷದ ಶ್ರಾದ್ದಕಾರ್ಯವು. ಕಾವೇರಿ ನದಿಯಲ್ಲಿ ಎಳ್ಳು ಮತ್ತು ಪಿಂಡ ಬಿಟ್ಟು ಪೂರ್ವಜರ ಮೋಕ್ಷಕ್ಕಾಗಿ ಶ್ರದ್ದಾಭಕ್ತಿಯ ಪೂಜೆ ನಡೆಯಿತು.
ಕಾಗೆಗಳಿಗೆ ಎಡೆ ಪ್ರಸಾದ ಕೊಟ್ಟು ಪೂರ್ಜರಿಗೆ ಮೋಕ್ಷಕ್ಕೆ ಮೊರೆ ಹೋದರು. ರಾಜ್ಯದ ವಿವಿದೆಡೆಯಿಂದ ಬಂದ ಆಸ್ತಿಕರಿಂದ ನದಿ ದಡದಲ್ಲಿ ಪಿತೃಪಕ್ಷದ ಪೂಜೆಯಿಂದ ಕಾವೇರಿ ನದಿ ದಂಡೆಯ ಬಳಿ ತುಂಬಿ ಹೋಗಿವೆ ಆಸ್ತಿಕ ಭಕ್ತರ ವಾಹನಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401