ಭಾವ ಭೈರಾಗಿ
ಕವಿತೆ | ನಾನು ನಿನ್ನಂತೆಯೇ ಗೆಳತಿ
ನಾನು ನಿನ್ನಂತೆಯೇ ಗೆಳತಿ,
ನೋವನ್ನುಂಡು ನಲಿವ
ಹಂಚುತ್ತಿರುವವನು
ಕಣ್ಣೊಳಗಿನ ಕಾಂತ್ರಿಯ ಕಿಚ್ಚಿನಲ್ಲಿ
ಕಂಬನಿಯ ಇಂಗಿಸಿರುವವನು.
ಸಂಗಾತಿಗಳ ಸಂದಿಗ್ಧತೆಗೆ ಸ್ಪಂಧಿಸುವಲ್ಲೇ
ಸಮಯ ಕಳೆದವನು,
ಕಾಲ ಸರಿಯಿತಷ್ಟೇ
ಅವರ ದುಃಖ ಮುರಿಯಲಿಲ್ಲ.
ನಾನು ಸರ್ವಜ್ಞನಲ್ಲ ಗೆಳತಿ
ಉತ್ತರ ಬಾರದಕ್ಕೆ ಬೇಸರ ಬೇಡ
ನಾನೂ ನಿನ್ನಂತೆಯೇ,
ಎಷ್ಟೋ ಬಾರಿ ಮೆದುಳಿಗೆ
ಮಂಕಡರಿ ಮೌನವೇ ಧ್ವನಿಯಾಗುತ್ತದೆ.
ಪುರುಷತ್ವದೊಳಗೂ ಬೆಳೆದ, ಬೆಂದ
ಭಾವಗಳಿವೆ ಗೆಳತಿ
ಆದರೆ ; ಎಲ್ಲಾ ಭಾವನೆಗಳ
ಬರಹದೊಳಗೆ ಬಂಧಿಸುವಷ್ಟು
ಬುದ್ಧಿವಂತ ನಾನಲ್ಲ ಅಷ್ಟೇ.
–ದೀಪಕ್ ಕುಮಾರ್ ಹೊನ್ನಾಲೇ
ಸುದ್ದಿದಿನ.ಕಾಂ|ವಾಟ್ಸಾಪ್|9980346243