ದಿನದ ಸುದ್ದಿ
ಮುಟ್ಟು ಹುಟ್ಟಿನ ಮೂಲ
ಮೇ 28, ‘ವಿಶ್ವ ಮುಟ್ಟಿನ ನಿರ್ಮೂಲನ ದಿನ’ ಪ್ರಯುಕ್ತ
- ಶಿವಾನಂದ ಕಲಬುರಗಿ
ಹೌದು ನಾನೊಬ್ಬಳು ಹೆಣ್ಣು
ಹೆಣ್ಣು ಮಣ್ಣು ಹೊನ್ನುಗಳ
ಮೇಲೆ ಮನುಷ್ಯನ ಕಣ್ಣು
ಇದರಲ್ಲೇನಿದೆ ಹೊಸತನ ಅಲ್ಲವೇ
ಹೌದು ನಾನೋಬ್ಬಳು ಹೆಣ್ಣು
ನಾನು ನಿಮ್ಮ ಮನೆ ಮನಗಳನ್ನು
ಬೆಳಗುವ ನಿಸ್ವಾರ್ಥದ ಅಪರೂಪದ ಹೆಣ್ಣು
ಹೆಣ್ಣಿನ ಒಡಲನ್ನು ಬಗೆದು ತಿಂದುಂಡು ತೇಗುವ ಗಂಡು
ಹೆಣ್ಣಿನ ಬಸಿರನ್ನು ಸೀಳಿ ಭೂಮಿಗೆ ಬಂದ ಮೇಲೆ
ಹೆಣ್ಣಿನ ಅಂಗಾಂಗಗಳ ಮೇಲೆ ಗಂಡಿನ ಕಣ್ಣು
ಹೌದು ನಾನೋಬ್ಬಳು ಹೆಣ್ಣು
ಮುಟ್ಟಾದವಳೆಂದು ಯಾರು ನನ್ನ ಮುಟ್ಟಲಿಲ್ಲ
ಮುಟ್ಟಿನ ಹನಿ ನಿಂತು ಹೆಣ್ಣು ಗಂಡಿನಲ್ಲಿ ಒಂದಾದಾಗ
ಮುಟ್ಟಿನ ಹೊಲೆಯೊಂದು ಗಟ್ಟಿ ಗೊಂಡು
ಹೌದು ನಾನೋಬ್ಬಳು ಹೆಣ್ಣು
ರಕ್ತದ ಮುದ್ದೆಯನ್ನು ಗರ್ಭದಲ್ಲಿ ಬೆಳೆಸಿಕೊಂಡು
ಮುತ್ತಿನಂತ ಮಗು ಹೆತ್ತು ಕೊಟ್ಟ ಹೆಣ್ಣು ನಾನಲ್ಲವೇ
ಮುಟ್ಟು ಹೇಗೆ ಮೈಲಿಗೆಯಾಗುತ್ತದೆ ನಾಕಾಣೆ
ಹೌದು ನಾನೋಬ್ಬಳು ಹೆಣ್ಣು
ಮುಟ್ಟಾದ ಮೂರು ದಿವಸಕ್ಕೆ ಹುಟ್ಟಿ ಬಂದ ಹೆಣ್ಣು-ಗಂಡು ಶ್ರೇಷ್ಠ-ಕನಿಷ್ಠ ವೆಂಬ ಭಿನ್ನವೇಕೆ
ಮೊಲೆ ಮೇಲಿನ ಮೋಹ ಕಾಮಕ್ಕೆ ಕಾರಣವೇ
ಹೌದು ನಾನೋಬ್ಬಳು ಹೆಣ್ಣು
ರಕ್ತ ಬಸಿದು ಅಮೃತವ ಉಣಿಸಲಿಲ್ಲವೇ
ಹೌದು ನಾನೊಬ್ಬಳು ಕಾಮ ಕೆರಳಿಸುವ ಹೆಣ್ಣು
ಹೆಣ್ಣಿನ ನಿತಂಬಗಳ ಮೇಲೆ ಬಹುತೇಕ ಕಣ್ಣು
ಹೆಣ್ಣಿನ ಎದೆಯಾಳ ಸಿರಿ ನೋಡುವ ಕಣ್ಣು
ಹೆಣ್ಣಿನ ಅಂತರಂಗವು ಯಾವ ಕಣ್ಣಿಗೂ ಕಾಣಲಿಲ್ಲ ಹೌದು ನಾನೋಬ್ಬಳು ಹೆಣ್ಣು
ಹೆಣ್ಣೆಂದರೆ ಮಕ್ಕಳೇರುವ ಯಂತ್ರವಲ್ಲ
ಹೆಣ್ಣು ಜಗದ ಕಣ್ಣು ಹೆಣ್ಣು ಸೃಷ್ಟಿಯ ಕಣ್ಣು
ಮುಟ್ಟು ಮೈಲಿಗೆಯಲ್ಲ ಮುಟ್ಟು ಹುಟ್ಟಿನ ಮೂಲ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243