ಭಾವ ಭೈರಾಗಿ
ಕವಿತೆ | ಇತಿಹಾಸ
ನಾನ್ಯಾವಾಗ ಈ ಜಗತ್ತಿನ ಇತಿಹಾಸ ಬರೆಯುವೆನೋ,
ಅಂದು ನನ್ನ ಮೇಲಾದ ಘೋರ ಅನ್ಯಾಯ ದಾಖಲಿಸುವೆನು !
ನಿರ್ದೋಷಿಗಳನ್ನು ದೋಷಿಗಳೆಂದು ಠರಾಯಿಸೋ
ವ್ಯವಸ್ಥೆಯ ಇತಿಹಾಸ ಬರೆಯುವೆನು !
ಸಮಾಜಗೈದ ಅತ್ಯಾಚಾರಗಳ ಪಟ್ಟಿಮಾಡಿ
ಗಾಥಾ ಹೇಳಿಯೇನು !
ಗೀತಾ, ಕುರಾನಗಳ ಖರೇ ಅರ್ಥ ತಿಳಿಸುವೆನು
ಪ್ರತಿಯೊಂದು ಗುನ್ನೆ ಹಿಂದಿನ ಉದ್ದೇಶ ಬರೆಯುವೆನು !
ಸೀತೆಯ ಮೇಲಾದ ಅನ್ಯಾಯ
ಸಕೀನಾಳ ಮೇಲಿನ ದೌರ್ಜನ್ಯ ಬರೆಯುವೆನು
ಗುಡಿಯೊಳಗೆ ಪ್ರಾರ್ಥನೆ
ಕುರಾನದೊಳಗಿನ ಆಯಾತ ಹೇಳುವೆನು !
ನಾನ್ಯಾವಾಗ ಈ ಜಗತ್ತಿನ ಇತಿಹಾಸ ಬರೆಯುವೆನೋ
ಆಗ ನನ್ನ ಮೇಲಾದ ಘೋರ ಅನ್ಯಾಯ ದಾಖಲಿಸುವೆನು !
(‘ಮರಾಠಿ ಕೈದಿಗಳ ಕವಿತೆಗಳು’ ಕವನ ಸಂಕಲನದಿಂದ ಈ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯ ಸಂಪಾದಕರು : ಉತ್ತಮ ಕಾಂಬಳೆ, ಪ್ರಕಟಣೆ ವರ್ಷ : 2004 )
–ಮೂಲ ಮರಾಠಿ : ರಿಯಾಝ ಬಾದಶಹಾ ಮುಲ್ಲಾ
ಮಧ್ಯವರ್ತಿ ಕಾರಾಗೃಹ, ಔರಂಗಾಬಾದ್
ಕನ್ನಡಕ್ಕೆ : ಡಿ.ಎಸ್.ಚೌಗಲೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243