ದಿನದ ಸುದ್ದಿ
ದಾವಣಗೆರೆ | ಮಂಗಳವಾರ ವಿದ್ಯುತ್ ವ್ಯತ್ಯಯ
ಸುದ್ದಿದಿನ,ದಾವಣಗೆರೆ : 220 ಕೆ.ವಿ ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ದಾವಣಗೆರೆ-ಚಿತ್ರದುರ್ಗ 66ಕೆ.ವಿ ಮಾರ್ಗದ ವಾಹಕವನ್ನು ಎಳೆಯುವ ತುರ್ತು ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜು.07 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೆಳ್ಳೆಕಟ್ಟೆ ಹಾಗೂ ಕಾಡಜ್ಜಿ ವಿದ್ಯುತ್ ವಿತರಣ ಕೇಂದ್ರಗಳಿಂದ ಸರಬರಾಜಾಗುವ ಕಾಡಜ್ಜಿ, ಪುಟಗಾನಾಳು, ಬಸವನಾಳು, ಎಲೆಬೇತೂರು, ಅಣಜಿ, ಕಿತ್ತೂರು, ಸಿದ್ದನೂರು, ಗುಡಾಳು, ಮಳ್ಳೆಕಟ್ಟೆ ಹಾಗೂ ಆಲೂರು ಗ್ರಾಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243