ದಿನದ ಸುದ್ದಿ
ವಿಮಾನದಲ್ಲೂ ಆಯ್ತು ಪವರ್ ಕಟ್ !
ಸುದ್ದಿದಿನ ಡೆಸ್ಕ್: ಜನವಸತಿ ಪ್ರದೇಶಗಳಲ್ಲಿಪವರ್ ಕಟ್ ಆಗೋದು ಮಾಮೂಲಿ. ವಿಮಾನದಲ್ಲಿ ಪವರ್ ಕಟ್ ಆದ್ರೆ ಪ್ರಯಾಣಿಕರ ಪರಿಸ್ಥಿತಿ ಏನಾಗಬಾರದು ಹೇಳಿ?
ದಿಲ್ಲಿಗೆ ತೆರಳುತ್ತಿದ್ದ ಜೆಟ್ ಏರ್‍ವೇಸ್ ವಿಮಾನ ಪುಣೆಯಲ್ಲಿ ಲ್ಯಾಂಡ್ ಆದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ದೀಪಗಳು ಹಾಗೂ ಹವಾ ನಿಯಂತ್ರಣಗಳು 30 ನಿಮಿಷಗಳ ಕಾಲ ಬಂದ್ ಆಗಿದ್ದರಿಂದ ಪ್ರಯಾಣಿಕರು ತತ್ತರಿಸಿಹೋದರು.
ವಿಮಾನವು ಪುಣೆಯಿಂದ 5.40ಕ್ಕೆ ದಿಲ್ಲಿಗೆ ಹೊರಡಬೇಕಿಗಿತ್ತು. ವಿದ್ಯುತ್ ಸಮಸ್ಯೆಯಿಂದಾಗಿ 7.02ಕ್ಕೆ ತಲುಪಬೇಕಿದ್ದ ವಿಮಾನ ರಾತ್ರಿ 9.30ಕ್ಕೆ ರಾಜಧಾನಿ ತಲುಪಿದೆ.
ಮನೆಯಲ್ಲಿ ಯುಪಿಎಸ್ ವ್ಯವಸ್ಥೆ ಇರುವಂತೆ ವಿಮಾನದಲ್ಲಿ ಏಕಿಲ್ಲ ಎಂದು ಪ್ರಶ್ನಿಸಿರುವ ಪ್ರಯಾಣಿಕರು ಜೆಟ್ ಏರ್‍ವೇಸ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಈ ಪ್ರಕರಣದ ವಿರುದ್ಧ ವಿಮಾನಯಾನ ಸಚಿವಾಲಯಕ್ಕೆ ದೂರು ನೀಡುವುದಾಗಿ ಕೆಲವರು ಹೇಳಿದ್ದಾರೆ.
ದೇಶದಲ್ಲಿ ಅಗ್ಗದ ವಿಮಾನಯಾನ ಸೇವೆ ಒದಗಿಸುತ್ತಿರುವ ವೈಮಾನಿಕ ಸಂಸ್ಥೆಗಳಲ್ಲಿ ಜೆಟ್ ಏರ್‍ವೇಸ್ ಕೂಡ ಒಂದು.