ರಾಜಕೀಯ

ರಾಹುಲ್ – ಮೋದಿ ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸವಿಲ್ಲವಾ..? : ಪ್ರಕಾಶ್ ರೈ

Published

on

ಸುದ್ದಿದಿನ,ಬೆಂಗಳೂರು: ಎರಡೆರಡು ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ವಿಚಾರ ಡಬಲ್ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಲೋಕಸಭೆಯ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ವಿರೋಧ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಮಾತನಾಡಿ,ರಾಹುಲ್ ಆಗಲೀ ಮೋದಿ ಆಗಲಿ ಯಾಕೆ ಎರಡೆರಡು ಕಡೆ ನಿಲ್ಬೇಕು. ಜನರ ಟ್ಯಾಕ್ಸ್ ಹಣ ಯಾಕೆ ವ್ಯರ್ಥ ಮಾಡ್ತಾರೆ ಇವ್ರು.ಹಣ ಯಾರಪ್ಪನದ್ದು? ನಿಮ್ಮ ಕ್ಷೇತ್ರದಲ್ಲಿ ನಿಂತು ಗೆಲ್ಲೋಕೆ ವಿಶ್ವಾಸ ಇಲ್ವಾ ನಿಮಗೆ?

ರಾಹುಲ್ ಗಾಂಧಿ ಹೆಸರು ಬೆಂಗಳೂರು ಕೇಂದ್ರಕ್ಕೆ ಕೇಳಿ ಬರ್ತಿದೆ. ರಾಹುಲ್ ಗಾಂಧಿ ಇಲ್ಲಿಯವರಾ?
ಈ ಕ್ಷೇತ್ರ, ಇಲ್ಲಿನ‌ ಜನರ ಬಗ್ಗೆ ರಾಹುಲ್ ಗಾಂಧಿಗೆ ಗೊತ್ತಿದೆಯಾ?

  • ಸುಮಲತಾಗೆ ನನ್ನ ಬೆಂಬಲ ; ನಿಖಿಲ್ ರಾಜಕೀಯಕ್ಕೆ ಬರುವ ವಯಸ್ಸಲ್ಲ

ಈ‌ ಸಂದರ್ಭದಲ್ಲಿ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಮಂಡ್ಯದ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು.ಸುಮಲತಾ ಸರಿಯಾದ ರೀತಿಯಲ್ಲಿ ಮಾತನಾಡ್ತಾ ಇದ್ದಾರೆ.ಅನುಭವಸ್ಥರ ರೀತಿಯಲ್ಲಿ ಮಾತನಾಡುತ್ತಿದ್ದಾರೆ.‌ಅವರಿಗೆ ರಾಜಕೀಯ ಗೊತ್ತಿಲ್ಲ ಅಂತ ಹೇಳಕ್ಕಾಗಲ್ಲ. ಒಳ್ಳೆಯ ರಾಜಕೀಯ ಬೇಕು ಅಂತ ಹೇಳ್ತಾ ಇದ್ದಾರೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸ್ಪರ್ಧೆ ನಡೆಸುವ ಹಕ್ಕು ಅವರಿಗಿದೆ. ಸುಮಲತಾ ಅವ್ರು ಅಂಬರೀಶ್ ಜೊತೆ ಇದ್ದವರು, ಮಂಡ್ಯದ ಸೊಸೆ. ನನಗೆ ಹಲವು ವರ್ಷಗಳಿಂದ ಪರಿಚಯ ಇದಾರೆ. ಅವರಿಗೆ ಬೆಂಬಲವಾಗಿ ನಾನು ಇದ್ದೀನಿ.

ನಿಖಿಲ್ ಕುಮಾರಸ್ವಾಮಿ ಮಂಡ್ಯ ಸ್ಪರ್ಧೆ ವಿಚಾರ, ನಿಖಿಲ್ ರಾಜಕೀಯಕ್ಕೆ ಇನ್ನು ಸ್ವಲ್ಪ ವಿಳಂಬವಾಗಿ ಎಂಟ್ರಿ ಕೊಡಬೇಕಾಗಿತ್ತು. ನಿಖಿಲ್ ರಾಜಕೀಯಕ್ಕೆ ಬರುವ ವಯಸ್ಸಲ್ಲ ಇದು. ನಿಖಿಲ್ ಯುವಕರು, ಇನ್ನಷ್ಟು ಅನುಭವದ ಅಗತ್ಯ ಇದೆ.ಈಗಷ್ಟೇ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಇದನ್ನು ನಿಖಿಲ್ಗೆ ಪ್ರೀತಿಯಿಂದಲೇ ಹೇಳ್ತಿದೀನಿ ನಾನು ಎಂದರು.

ಕುಟುಂಬ ರಾಜಕಾರಣ ವಿಚಾರ. ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕೀಯ ಅಲ್ಲ. ಕುಟುಂಬ ಎಂಬ ಕಾರಣಕ್ಕೆ ರಾಜಕೀಯಕ್ಕೆ ಬಂದರೆ ಕುಟುಂಬ ರಾಜಕೀಯ. ಅದನ್ನು ಜನರು ನಿರ್ಧಾರ ಮಾಡ್ತಾರೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version