ದಿನದ ಸುದ್ದಿ
ಪ್ರೇರಣಾ ಸಂಸ್ಥೆಯಲ್ಲಿ “ನಮ್ಮ ಸಾಧಕರು” ಕಾರ್ಯಕ್ರಮ
ಸುದ್ದಿದಿನ, ದಾವಣಗೆರೆ : ದಾವಣಗೆರೆ ಸಮೀಪದ ದೊಡ್ಡಬಾತಿ ಗ್ರಾಮದಲ್ಲಿರುವ ವಿಶ್ವಗುರು ಭಾರತ ಪ್ರತಿಷ್ಠಾನ(ರಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದಲ್ಲಿ ದಿನಾಂಕ : 05/12/2020 ರ ಬೆಳಗ್ಗೆ 10.30 ಕ್ಕೆ ನಮ್ಮ ಸಾಧಕರು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪ್ರತಿ ಭಾನುವಾರ ಆಯೋಜಿಸಲಾಗುವ ಈ ಕಾರ್ಯಕ್ರಮದ ಈ ವಾರದ ಸಾಧಕರಾಗಿ ಆಗಮಿಸಿದ್ದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾದ ಡಾ॥ ಹೆಚ್.ಎಸ್. ಮಂಜುನಾಥ ಕುರ್ಕಿ ಅವರು ತಮ್ಮ ಸಾಧನೆಯ ಹಾದಿಯ ಕುರಿತು ಮಕ್ಕಳಿಗೆ ತಿಳಿಸಿ ತಾವೂ ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸುವ ಗುರಿ ಹೊಂದವಂತೆ ಮಕ್ಕಳಿಗೆ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಚೇತನಾ ಮಂಜುನಾಥ ಕುರ್ಕಿ ಇವರು ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಅತಿಥಿ ಕ.ಸಾ.ಪ. ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ದಾವಣಗೆರೆ ಇವರು ಮಕ್ಕಳಿಗೆ ಕೆಲ ಹಿತವಚನ ನುಡಿದು ಸಿಹಿ ಮತ್ತು ಹಣ್ಣುಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಿವಕುಮಾರ್ ಮೇಗಳಮನಿ, ಮತ್ತು ಪ್ರಧಾನ ಕಾರ್ಯದರ್ಶಿ ಶಂಭುಲಿಂಗ ಹೊಸಮನಿ, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243