/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಖಾಸಗಿ ಆಸ್ಪತ್ರೆಯ ಕ್ರೌರ್ಯ ಕುರಿತು ಪತ್ರಕರ್ತ ರಾಜೀವ್ ಅವರ ಕರಾಳ ಅನುಭವ

Published

on

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಂಪುಟ ವಿಸ್ತರಣೆ ಮುನ್ನಾ ದಿನ, ಕೆಲಸ ಮುಗಿಸಿ ಮನೆಗೆ ಹೊರಟಿದ್ದೆ. ರಾತ್ರಿ 11.30ರ ಸಮಯ. ಪರಿಚಯದ ಕಿರಿಯ ಗೆಳೆಯನೊಬ್ಬ ಕರೆ ಮಾಡಿದ. “ನನ್ನ ರೂಂ ಮೆಟ್ ದಾರಿಯಲ್ಲಿ ಬರುವಾಗ, ಅಸೌಖ್ಯದಿಂದ ಒದ್ದಾಡಿ, ಮೂರ್ಛೆ ತಪ್ಪಿ ಬಿದ್ದನಂತೆ. ತಕ್ಷಣ ಆತನನ್ನು ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದಾಗ, ಆತ ತಿಗಣಿ ಪೌಡರ್ ಕುಡಿದಿರುವುದು ಗೊತ್ತಾಗಿದೆ. ತಕ್ಷಣ ಬರ್ತೀಯಾ ?” ಒಂದೇ ಉಸಿರಿನಲ್ಲಿ ಹೇಳಿದ. ತಕ್ಷಣ ಅಲ್ಲಿಗೆ ಹೋದೆ. ಆ ವೇಳೆಗೆ ಸೋಮಶೇಖರ್, ಸುಖೇಶ್ ಮತ್ತು ಸಾದಿಯಾ ಕೂಡ ಅಲ್ಲಿದ್ದರು. ತಿಗಣಿ ಪೌಡರ್ ಕುಡಿದಿದ್ದವ ಚೆನ್ನಾಗಿಯೇ ಮಾತನಾಡುತ್ತಿದ್ದ. ಮದುವೆ ಮಾಡದ ಅಪ್ಪನನ್ನು ಬೆದರಿಸಲು ಕುಡಿದಿರುವುದಾಗಿ ವಿವರಿಸಿದ.

ಬಳಿಕ ಆಸ್ಪತ್ರೆಯವರ ಜತೆ ಮಾತನಾಡಿದೆವು. “ಗಾಬರಿ ಬೀಳಬೇಕಿಲ್ಲ. ಆದರೂ, 24 ಗಂಟೆ ಐಸಿಯೂ ನಲ್ಲಿ ಇಟ್ಟು ಅಬ್ಸರ್ವೇಷನ್ ಮಾಡಬೇಕಾಗುತ್ತೆ. ಐಸಿಯೂಗೆ 6000 ರೂ. ಆಗುತ್ತೆ,”” ಅಂದ್ರು
ಗೆಳೆಯರಾದ ಸುಖೇಶ, ಸೋಮು ಸೋದರಿ ಸಾದಿಯಾ ಅವರೇ ಆ ಹಣ ತುಂಬಿದರು. ಬಾಕಿ ಔಷೋಧಪಚಾರಕ್ಕೆ ಎಷ್ಟು ಖರ್ಚಾಗಬಹುದು ಎಂದು ವಿಚಾರಿಸಿದೆವು. 2 ರಿಂದ 3 ಸಾವಿರ ಆಗಬಹುದು ಅಂದ್ರು ಅಸ್ಪತ್ರೆಯವರು.

ಪರಿಚಯದ ನನ್ನ ಗೆಳೆಯ ಹಾಗೂ ಅಸ್ವಸ್ಥನಾಗಿದ್ದ ಆತನ ಗೆಳೆಯ-ಇಬ್ಬರೂ ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಬಂದವರು. ಅಸ್ವಸ್ಥ ಗೆಳೆಯನಂತೂ ಕೂಲಿಗೆಂದು ಒಂದು ಜತೆ ಬಟ್ಟೆ, ಚಪ್ಪಲಿಯಲ್ಲಿ ಬಂದವ. ತಳ ಸಮುದಾಯಕ್ಕೆ ಸೇರಿದ, ಬಡ ಕುಟುಂಬದ ಆತನ ಬಳಿ ಏನೂ ಇರಲಿಲ್ಲ. ನಾವೇ ಒಂದಿಷ್ಟು ಹಣ ನೀಡಿ, ಆಸ್ಪತ್ರೆಯಿಂದ ಮನೆಗೆ ಬಂದೆವು.

ಈ ನಡುವೆ, ಅಸ್ವಸ್ಥನಾಗಿ ದಾರಿಯಲ್ಲಿ ಬಿದ್ದವನನ್ನು ಖಾಸಗಿ ಆಸ್ಪತ್ರೆಗೆ ಕರೆತಂದಿದ್ದ ಮೂವರು ಪೊಲೀಸ್ ಪೇದೆಗಳು,ಆತನನ್ನು ಒಂದು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ, ಅದೇನೋ ಒಂದಿಷ್ಡು ಬರೆದುಕೊಂಡು ಹೋದರು.

ಮರುದಿನ ಮಧ್ಯಾಹ್ನ ಆಸ್ಪತ್ರೆಯಲ್ಲಿದ್ದ ಗೆಳೆಯ ಕರೆ ಮಾಡಿದ. ಡಿಸ್ ಚಾರ್ಜ್ ಮಾಡಿಸುವ ವಿಷಯವಿರಬೇಕು ಎಂದುಕೊಂಡೆ ಕರೆ ಸ್ವೀಕರಿಸಿದೆ. ಆದರೆ ಆತ, “”ಅಣ್ಣಾ.. ಆತ ಸ್ವಲ್ಪ ಸೀರಿಯಸ್ ಆಗಿದ್ದಾನೆ. ಏನನ್ನೂ ಹೇಳಲು ಸಾಧ್ಯ.

ರಾಜೀವ್

ಕೃಪೆ: ರಾಜೀವ್ ಅವರ ಫೇಸ್ಬುಕ್ ವಾಲ್ನಿಂದ

Leave a Reply

Your email address will not be published. Required fields are marked *

Trending

Exit mobile version