ದಿನದ ಸುದ್ದಿ

ದಲಿತ ಮಹಿಳೆ ಜೀತಕ್ಕೆ ಎಳೆದೊಯ್ದ ಪ್ರಕರಣ | ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

Published

on

ಸುದ್ದಿದಿನ, ಮದ್ದೂರು : ದೇಶದಲ್ಲಿ ಜೀತ ಪದ್ಧತಿ ನಿಷೇಧ ಮಾಡಿ ಜೀತ ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಮದ್ದೂರು ತಾಲ್ಲೂಕು ಬೆಕ್ಕಳಲೆ ಗ್ರಾಮದ ಪರಿಶಿಷ್ಟ ಜಾತಿ ಮಹಿಳೆ ಜಾನಕಮ್ಮಳನ್ನು ಅಪಹರಿಸಿದ ಕಾಂಗ್ರೆಸ್ ಮುಖಂಡ ನಾಗೇಶ್ ಮತ್ತು ಆತನ ಸಹಚರರ ಗುಂಡಾವರ್ತನೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ರವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಮಾಯಿಸಿದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಅಪಹರಣಕಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿಂದ ತಾಲ್ಲೂಕು ಕಛೇರಿಗೆ ಆಗಮಿಸಿದ ಕಾರ್ಯಕರ್ತರು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ವಿರುದ್ಧ ಕೂಗಿ ಮಂಡ್ಯ ಜಿಲ್ಲೆಯಲ್ಲಿ ಜೀತ ಪದ್ಧತಿ ಜೀವಂತವಾಗಿದ್ದರು ಜೀತ ಪದ್ಧತಿ ಇಲ್ಲ ಎಂದು ಜಿಲ್ಲಾಡಳಿತ ವಿಮುಕ್ತಿಯಾಗಿದೆ ಎಂದು ಘೋಷಿಸಿರುವುದು ಖಂಡನೀಯ ಎಂದು ತಿಳಿಸಿದರು.

ಅಪಹರಣ ಮಾಡಿದ ನಾಗೇಶ್ ಮತ್ತು ಆತನ ಸಹಚರರನ್ನು ಗೂಂಡಾ ಕಾಯ್ದೆ ಹೆಚ್ಚುವರಿಯಾಗಿ ದಾಖಲಿಸ ಬೇಕು, ನೊಂದ ಮಹಿಳೆಗೆ ಜೀತ ವಿಮುಕ್ತಿ ಪರಿಹಾರವಾಗಿ 10ಲಕ್ಷ ರೂಪಾಯಿ ಧನ ಸಹಾಯ ನೀಡಬೇಕು ಮತ್ತು ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೆತ್ರತ್ವವನ್ನು ಅಣ್ಣೂರು ರಾಜಣ್ಣ ,ಅಂಬರೀಷ್, ಶಿವು,ಸತ್ಯ, ನಾರಾಯಣ, ರಾಜೇಶ್,ಮನು,ಮುತ್ತಯ್ಯ, ಮಾದೇಶ್, ಶಂಕರ್, ಗೀತಾ, ಉಮೇಶ್,ಅಭಿಗೌಡ, ಜೀವಿಕ ಸಂಸ್ಥೆಯ ಮುಖಂಡರುಗಳು ಹಾಗೂ ದಲಿತ ಪರ ಸಂಘಟನೆಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version