ದಿನದ ಸುದ್ದಿ
ಸೈಕಲ್ ಶಾಪ್ ನಲ್ಲಿ ಅಪ್ಪನಿಗೆ ಸಾಥ್ ನೀಡುತ್ತ ಕುಸುಮ ಪಿಯುಸಿಯಲ್ಲಿ ಗಳಿಸಿದ್ದು 600ಕ್ಕೆ 594ಅಂಕಗಳು..!
ಸುದ್ದಿದಿನ, ಬಳ್ಳಾರಿ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕುಸುಮ ಎಂಬ ವಿದ್ಯಾರ್ಥಿನಿ ಕಲಾ ವಿಭಾಗದಲ್ಲಿ ಹೆಚ್ಚು ಅಂಕ ಪಡೆದು ದಾಖಲೆ ಬರೆದಿದ್ದಾರೆ.
ಕೊಟ್ಟೂರು ಪಿಯು ಕಾಲೇಜಿನ ಕುಸುಮಾಳ ತಂದೆ ಸೈಕಲ್ ಶಾಪ್ ನಡೆಸುತ್ತಿದ್ದು, ಓದಿನ ಜೊತೆ ಅಪ್ಪನ ಕೆಲಸಕ್ಕೆ ಸಾಥ್ ನೀಡುತ್ತಿದ್ದ ಈಕೆ ಹೆಚ್ಚು ಅಂಕ ಪಡೆ್ದುದು ಉತ್ತೀರ್ಣರಾಗಿರುವುದು ಸಂತೋಷಕರ ಸಂಗತಿಯಾಗಿದೆ. ಕುಸುಮ ಒಟ್ಟು 600 ಅಂಕಗಳಿಗೆ 594 ಅಂಕಗಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980246243