ದಿನದ ಸುದ್ದಿ
ದಾವಣಗೆರೆ | ಮಳೆಗೆ ಮನೆ ಹಾನಿ ; ಸಂತ್ರಸ್ಥೆ ಗಂಗಮ್ಮಗೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ, ಅಧಿಕಾರಿಗಳಿಗೆ ಮೆಚ್ಚುಗೆ
ಸುದ್ದಿದಿನ,ದಾವಣಗೆರೆ:ದಾವಣಗೆರೆ ಪಾಲಿಕೆ ವ್ಯಾಪ್ತಿಯ 21 ನೇ ವಾರ್ಡ್ನಲ್ಲಿ ಬಿ.ಬಸಾಪುರ ನಿವಾಸಿ ಗಂಗಮ್ಮ ಇವರ ಮನೆ ಮಳೆಯಿಂದ ಬಿದ್ದು ಹೋಗಿದ್ದು ಇವರ ತಾತ್ಕಾಲಿಕ ವಾಸಕ್ಕೆ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ಕಲ್ಪಿಸಿ ಮನೆ ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಅಕ್ಕಪಕ್ಕದ ನಿವಾಸಿಗಳ ಮನವೊಲಿಸಿ ತುರ್ತು ಸ್ಪಂದನೆ ಮಾಡಿದ ಅಧಿಕಾರಿಗಳ ಕಾರ್ಯಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜುಲೈ 26 ರಂದು ಮಳೆಯಿಂದ ಗಂಗಮ್ಮ ತಂದೆ ಕೊಟ್ರಚಾರಿ ಇವರ ಮನೆ ಬಿದ್ದು ಹೋಗಿರುತ್ತದೆ. ತಕ್ಷಣ ಸ್ಥಳಕ್ಕೆ ನ್ಯಾಯಾಧೀಶರು ಭೇಟಿ ನೀಡಿದಾಗ ತಹಶೀಲಾರ್, ಪಾಲಿಕೆ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು ಎಸ್‌ಡಿಆರ್‌ಎಫ್ ನಡಿ ಸಂತ್ರಸ್ಥೆಗೆ ಮನೆ ಪರಿಹಾರ, ಪಾಲಿಕೆಯಿಂದ ಮನೆ ನಿರ್ಮಾಣ ಮಾಡಲು ದಾಖಲೆಗಳ ಪರಿಶೀಲನೆ ಮಾಡಿದ್ದು ಎಲ್ಲಾ ದಾಖಲೆಗಳನ್ನು ನ್ಯಾಯಾಧೀಶರು ಪರಿಶೀಲನೆ ನಡೆಸಿ ಮಾಹಿತಿಯನ್ನು ಪಡೆದುಕೊಂಡರು. ಮತ್ತು ಸಂತ್ರಸ್ಥೆಗೆ ತಾತ್ಕಾಲಿಕವಾಗಿ ಎಲ್ಲಾ ನೆರವು ನೀಡಲು ವಿವಿಧ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಅಗತ್ಯ ಕ್ರಮ ಕೈಗೊಂಡಿರುತ್ತಾರೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243