ದಿನದ ಸುದ್ದಿ
ಬೆಂಗಳೂರಿನಲ್ಲಿ ಮಳೆ : ತೊಂದರೆಗೊಳಗಾದ ಮನೆಯವರಿಗೆ 25 ಸಾವಿರ ರೂ ಪರಿಹಾರ : ಸಿಎಂ ಬೊಮ್ಮಾಯಿ
ಸುದ್ದಿದಿನ ಡೆಸ್ಕ್ : ಬೆಂಗಳೂರಿನಲ್ಲಿ ಮಳೆಯಿಂದ ನೀರು ನುಗ್ಗಿ ತೊಂದರೆಗೊಳಗಾದ ಮನೆಯವರಿಗೆ ತಕ್ಷಣಕ್ಕೆ 25 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿವಿಧ ಬಡಾವಣೆಗಳ ಮಳೆ ಹಾನಿ ಪ್ರದೇಶಗಳಿಗೆ ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರಾಜಕಾಲುವೆ ಪ್ರದೇಶಗಳಲ್ಲಿ ಮನೆಗಳ ತೆರವು ಕಾರ್ಯವನ್ನು ಸಮರೋಪಾದಿಯಲ್ಲಿ ಮಾಡಲಾಗುವುದು. ಬೆಂಗಳೂರು ಈಗ ಬಿಬಿಎಂಪಿ ಆಗಿದೆ. ಬೆಂಗಳೂರಿನ ಆಡಳಿತಾತ್ಮಕ ರಚನೆಯನ್ನು ವಿಕೇಂದ್ರಿಕರಣಗೊಳಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243