ದಿನದ ಸುದ್ದಿ

ರಾಮಚಂದ್ರ ಹೆಚ್. ಡಿ ಅವರಿಗೆ ಪಿಎಚ್.ಡಿ ಪದವಿ

Published

on

ಸುದ್ದಿದಿನ,ಶೃಂಗೇರಿ: ಮೆಣಸೆ ಗ್ರಾಮದಲ್ಲಿನ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಅತಿಥಿ ಉಪನ್ಯಾಸಕ ರಾಮಚಂದ್ರ ಹೆಚ್ ಡಿ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.

ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಎನ್ ಡಿ ವಿರೂಪಾಕ್ಷ ಅವರ ಮಾರ್ಗದರ್ಶನದಲ್ಲಿ “Effect of yogasanas on the Motor Performance and Physiological Variables of Rastriya Sanskrit Sansthan students” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ 16/07/2022ರಂದು ಪಿಹೆಚ್ ಡಿ ಪದವಿ ನೀಡಿ ಗೌರವಿಸಿದೆ.

ರಾಮಚಂದ್ರ ಹೆಚ್ ಡಿ ಅವರಿಗೆ ಕುಟುಂಬ ವರ್ಗದವರು ಮತ್ತು ಮಿತ್ರ ವೃಂದದವರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version