ದಿನದ ಸುದ್ದಿ

ಗ್ರಾಮ ಪಂಚಾಯತಿ ಸದಸ್ಯರಿಗೆ ಹೂವಿನಹೊಳೆ ಪ್ರತಿಷ್ಠಾನ ಗೌರವ ಸದಸ್ಯತ್ವ ಪ್ರದಾನ : ಹಂಚಗುಳಿ ಗ್ರಾಮ ರಾಜ್ಯಕ್ಕೆ ಮಾದರಿ

Published

on

ಸುದ್ದಿದಿನ, ರಾಮನಗರ : ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿಗೆ ಹಂಚಗುಳಿ ಗ್ರಾಮದಿಂದ ಆಯ್ಕೆಯಾದ ಸದಸ್ಯರಾದ ಮಲ್ಲೇಶ್ ಹಾಗೂ ಶಾಂತಮ್ಮ ಅವರಿಗೆ ”ಹೂವಿನಹೊಳೆ ಪ್ರತಿಷ್ಠಾನದ ಐದು ವರ್ಷಗಳ ಗೌರವ ಸದಸ್ಯತ್ವ” ಪ್ರದಾನ ಮಾಡಲಾಯಿತು ಇದೇ ಸಂದರ್ಭದಲ್ಲಿ ನಮ್ನೂರಿಗೆ ನಮ್ಮ ಉಸಿರು ಬಳಗದಿಂದ ಹಂಚಗುಳಿ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ ಮತ್ತು ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಮುನುಚ್ಚೆಗೌಡರು ಉದ್ಘಾಟನೆ ಮಾಡಿ ಮಾತನಾಡುತ್ತಾ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲ ಶಾಲೆಗಳನ್ನು ಕರ್ನಾಟಕ ಸರ್ಕಾರಿ ಪಬ್ಲಿಕ್ ಶಾಲೆಯನ್ನಾಗಿ ಅಭಿವೃದ್ಧಿ ಪಡಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ನಂದಿ ಜೆ ಹೂವಿನಹೊಳೆ ಗ್ರಾ.ಪ. ಸದಸ್ಯರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಿ ಮುಂದಿನ ಐದು ವರ್ಷಗಳಲ್ಲಿ ಹಂಚಗುಳಿ ಗ್ರಾಮದಲ್ಲಿ ನಾವು ಕೆಲಸ ಮಾಡಲು ಹಾಗೂ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೆವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್ ಡಿ ಟಿ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ದಿಲೀಪ್ ಕುಮಾರ್ ಮಾತನಾಡಿ ಶಿಕ್ಷಣ ಎಲ್ಲರ ಹಕ್ಕು ಪ್ರತಿ ಗ್ರಾಮದ ಯುವಕರಿಗೂ ಉನ್ನತ ಕೆಲಸ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಹೂವಿನಹೊಳೆ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ನಾಯ್ಕಲ್ ದೊಡ್ಡಿ ಚಂದ್ರಶೇಖರ್, ಪ್ರಧಾನ ಸಂಚಾಲಕರಾದ ಹಂಚಗುಳಿ ಗಿರೀಶ್ ,ಸುನೀಲ್ ಕುಮಾರ್,ರಾಜಣ್ಣ ಹಾಗೂ ಗ್ರಾಮದ ಮುಖಂಡರಾದ,ಚೆಲುವರಾಜು, ಚಿಕೈದೆಗೌಡ, ಸುಂದ್ರೆಶ್, ಮಣಿಕಂಠ, ಮುತ್ತುರಾಜು,ಭಾಸ್ಕರ್, ಶಿವಕುಮಾರ್ ಅರ್ಚಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version