ಸಿನಿ ಸುದ್ದಿ
ರಮೇಶ್ ಗೆ ಮುತ್ತುಕೊಟ್ಟ ಹುಡುಗಿ ಲಂಡನ್ ನಲ್ಲಿ ಸಿಕ್ಕಳಂತೆ !
ಸುದ್ದಿದಿನ ಡೆಸ್ಕ್: ನಟ ರಮೇಶ್ ಅರವಿಂದ್ ಅಂದ್ರೆ ಯಾವ ಹುಡುಗಿ ತಾನೆ ಇಷ್ಟ ಪಡೋಲ್ಲ ಹೇಳಿ?
ಸೋಮವಾರ ಪ್ರಸಾರವಾದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ರಮೇಶ್ ಬಿಚ್ಚಿಟ್ಟ ಫ್ಲಾಶ್ ಬ್ಯಾಕ್ ವೊಂದು ನೋಡುಗರ ಗಮನ ಸೆಳೆಯಿತು.
ರಮೇಶ್ ಅವರು ತೀರ್ಥ ಹಳ್ಳಿಯ ಸಿಕೆ ರೋಡ್ ನ ಮನೆಯೊಂದರಲ್ಲಿ ಸಂಭ್ರಮ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಮೂವರು ಹೈ ಸ್ಕೂಲ್ ಹುಡುಗಿಯರಿಬ್ಬರು ನಿರ್ದೇಶಕರು ಕಟ್ ಹೇಳಿದ ಕೂಡಲೇ ರಮೇಶ್ ಅವರಿಗೆ ಮುತ್ತುಕೊಡಬೇಕೆಂದು ಬೆಟ್ ಕಟ್ಟಿದ್ದರು.
ಅದರಂತೆ ನಿರ್ದೇಶಕರು ಕಟ್ ಹೇಳಿದ ಕೂಡಲೇ ಹುಡುಗಿಯೊಬ್ಬಳು ಓಡಿಬಂದು ಮುತ್ತು ಕೊಟ್ಟಳು.
ಈಚೆಗೆ ರಮೇಶ್ ಅವರು ಲಂಡನ್ ನಲ್ಲಿ ಕನ್ನಡಿಗರಿಗಾಗಿ ಲೈಫ್ ಎಂಬ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ಮಧ್ಯೆ ಎದ್ದುನಿಂತ ಹುಡುಗಿ ಕೈ ಎತ್ತಿ ಸರ್, ನಾನು ನಿಮಗೆ ನೆನಪಿದ್ದೇನಾ ಎಂದು ಕೇಳಿದರು. ಯಾರಮ್ಮಾ ನೀನು ಎಂದು ಕೇಳಿದಾಗ ತೀರ್ಥಹಳ್ಳಿಯಲ್ಲಿ ಮುತ್ತು ಕೊಟ್ಟ ಹುಡುಗಿ ತಾನೇ ಎಂದು ನೆನಪಿಸಿದಳು.
ನಾನು ಆಗ ಸರಿಯಾಗಿ ಮುತ್ತು ಕೊಡಲಿಲ್ಲ ಈಗ ಕೊಡ್ಲಾ ಎಂದು ಕೇಳಿದಳಂತೆ. ತೀರ್ಥಹಳ್ಳಿ ಹುಡುಗಿಯನ್ನು ಸಾವಿರಾರು ಕಿ.ಮೀ. ದೂರದಲ್ಲಿ ನೋಡಿ ಖುಷಿಯಾಯಿತು ಎಂದು ರಮೇಶ್ ಹೇಳಿದರು.