ದಿನದ ಸುದ್ದಿ

ಅಂಬೇಡ್ಕರ್ ಮುಖವಾಡ ಕಳಚಿಟ್ಟರಾ ಸಚಿವ ಮಹೇಶ್

Published

on

ಸಚಿವ ಮಹೇಶ್ ಜೆ ಎಸ್ ಎಸ್ ಸ್ವಾಮೀಜಿ ಕಾಲಿಗೆ ಬಿಳುತ್ತರುವುದು

ಸುದ್ದಿದಿನ ಡೆಸ್ಕ್: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಅವರು ಕಾರ್ಯಕ್ರಮ ವೊಂದರಲ್ಲಿ ಶಿವರಾತ್ರೀಶ್ವರ ಸ್ವಾಮೀಜಿ ಅವರ ಕಾಲಿಗೆ ಬಿದ್ದ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಪರಿಶಿಷ್ಟ ಸಮುದಾಯದವರಾಗಿ ಮಹೇಶ್ ಅವರು ಸ್ವಾಮೀಜಿಯೊಬ್ಬರ ಕಾಲಿಗೆ ಎರಗಿದ್ದು ಅಕ್ಷರಶಃ ತಪ್ಪು, ಅದೂ ಅಲ್ಲದೆ ಬಿಎಸ್‍ಪಿಯಂತ ಪಕ್ಕಾ ಎಡ ಪಕ್ಷದಲ್ಲಿದ್ದುಕೊಂಡು ಕಂದಾಚಾರಗಳಿಗೆ ಜೋತುಬೀಳುವುದು ಎಷ್ಟು ಮಾತ್ರ ಸರಿ ಎಂದು ಎಫ್‍ಬಿ ಬಳಕೆದಾರರು ಪ್ರಶ್ನಿಸಿದ್ದಾರೆ.

ಇಷ್ಟು ದಿನ ಮಹೇಶ್ ಅವರು ಅಂಬೇಡ್ಕರ್ ವಾದಿ ಎಂಬ ಸುಳ್ಳು ಮುಖವಾಡ ಹಾಕಿಕೊಂಡು ತಿರುಗುತ್ತಿದ್ದರೇ? ಇವರನ್ನು ಬೆಂಬಲಿಸಿ ನಾವು ತಪ್ಪು ಮಾಡಿದೆವೇ? ಎಂದೂ ತಮ್ಮನ್ನು ತಾವು ಪ್ರಶ್ನೆಮಾಡಿಕೊಂಡಿದ್ದಾರೆ.

ಅಧಿಕಾರದ ಆರಂಭದಲ್ಲೇ ಮಹೇಶ್ ಅವರು ಗಾಂಧೀಜಿ ಫೋಟೊ ಹಾಕಿಸಿ ಚರ್ಚೆಗೆ ಒಳಗಾಗಿದ್ದರು. ಇದೀಗ ಸ್ವಾಮೀಜಿಗೆ ಕಾಲಿಗೆ ಬಿದ್ದ ವಿಷಯ ಇನ್ನಷ್ಟು ಬಿಸಿ ಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿದೆ

Leave a Reply

Your email address will not be published. Required fields are marked *

Trending

Exit mobile version